Advertisement

ಮಹಾ ಮಸ್ತಕಾಭಿಷೇಕಕ್ಕೆ275 ಕೋಟಿ ರೂ.ಬಿಡುಗಡೆ

06:20 AM Feb 02, 2018 | Team Udayavani |

ಹಾಸನ : ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಮೂಲ ಸೌಕರ್ಯಗಳಿಗೆ ಸರ್ಕಾರ 275 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌ .ಸಿ.ಮಹದೇವಪ್ಪ ತಿಳಿಸಿದರು.

Advertisement

ಶ್ರವಣಬೆಳಗೊಳಕ್ಕೆ ಗುರುವಾರ ಭೇಟಿ ನೀಡಿದ್ದ ಸಚಿವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಜರ್ಮನ್‌ ಟೆಕ್ನಾಲಜಿಯಲ್ಲಿ ಅಟ್ಟಣಿಗೆ ನಿರ್ಮಾಣ,ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಮೂಲ ಸೌಕರ್ಯಗಳಾದ ವಸತಿ, ಆಹಾರ, ರಸ್ತೆ, ಆರೋಗ್ಯ,ಕುಡಿಯುವ ನೀರು, ವಿದ್ಯುತ್‌ ಪೂರೈಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ 175 ಕೋಟಿ ರೂ. ಜೊತೆಗೆ ರಸ್ತೆಗಳ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಿಗೆ ಹೆಚ್ಚುವರಿಯಾಗಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೂ 275 ಕೋಟಿ ರೂ.ಬಿಡುಗಡೆಯಾಗಿದೆ. ಪ್ರಾಕೃತ ವಿಶ್ವವಿದ್ಯಾನಿಲಯ ಕಟ್ಟಡ ನಿರ್ಮಾಣಕ್ಕೆ 21 ಕೋಟಿ ಮತ್ತು ಗಣ್ಯರ ಅತಿಥಿ ಗೃಹ
ನಿರ್ಮಾಣಕ್ಕೂ 4 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ಸಿಎಂ ಸಿದ್ದರಾಮಯ್ಯಅವರ ನೇತೃತ್ವದಲ್ಲಿ 3 ಸಭೆಗಳನ್ನು ನಡೆಸಿದ್ದರಿಂದ ಮಹಾಮಸ್ತಕಾಭಿಷೇಕದ ಸಿದ್ಧತಾ ಕಾರ್ಯಗಳು
ತ್ವರಿತವಾಗಿ ಪೂರ್ಣಗೊಳ್ಳಲು ಸಹಕಾರಿಯಾಯಿತು. ಕ್ರಿಯಾ ಯೋಜನೆಯಂತೆ ಸಿದಟಛಿತಾ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲು ಎಲ್ಲಾ ಇಲಾಖಾಧಿಕಾರಿಗಳ ಸಹಕಾರ ದೊರೆತಿದೆ. ಲೋಕಸಭಾ ಸದಸ್ಯರು ಹಾಗೂ ಮಾಜಿ ಪ್ರಧಾನಿಗಳೂ ಆದ ದೇವೇಗೌಡರು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವರೆಂಬ ವಿಶ್ವಾಸವಿದೆ ಎಂದು ಸಚಿವರು ತಿಳಿಸಿದರು.

ಸಚಿವರು-ಡೀಸಿ ಸಮಾಧಾನಪಡಿಸಿ: ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸಚಿವ ಮಹದೇವಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ, ರಾಜ್ಯ ಸರ್ಕಾರದ ಸಂಪೂರ್ಣ ಸಹಕಾರ ನೀಡುತ್ತಿರುವುದು ತೃಪ್ತಿ ತಂದಿದೆ.

ಜಿಲ್ಲಾಡಳಿತ ವತಿಯಿಂದ ಎಲ್ಲಾ ರೀತಿಯ ಸಹಕಾರ ದೊರೆಯುತ್ತಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಹಿರಿಯ ಸಚಿವರಾದ ನೀವು ಪರಿಹರಿಸಬೇಕು ಎಂದು ಸಲಹೆ ನೀಡಿದರು.

Advertisement

ಉಪನಗರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ವೇದಿಕೆ ಮತ್ತು ವಸ್ತುಪ್ರದರ್ಶನ, ಭೋಜನಾಲಯ, ಮುಖ್ಯ ವೇದಿಕೆ, ಅಗ್ನಿಶಾಮಕ, ಹೆಲಿಪ್ಯಾಡ್‌, ತಾತ್ಕಾಲಿಕ ಬಸ್‌ ನಿಲ್ದಾಣಕ್ಕೂ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಲಾಯಿತು.

ಸಚಿವರು 108 ಚಂದ್ರಬಾಬು ಸಾಗರ ಮಹಾರಾಜರನ್ನು ಭೇಟಿ ಮಾಡಿ ಮಹಾಮಸ್ತಕಾಭಿಷೇಕ ಮಹೋತ್ಸವದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next