Advertisement
ಇದೇ ತ್ತೈಮಾಸಿಕದಲ್ಲಿ ಬ್ಯಾಂಕ್ ಒಟ್ಟು 3,510.11 ಕೋಟಿ ರೂ. ಆದಾಯ ಗಳಿಸಿದ್ದು, ಶೇ. 6.52ರಷ್ಟು ಏರಿಕೆ ಕಂಡುಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,295 ಕೋಟಿ ರೂ. ಸಂಗ್ರಹವಾಗಿತ್ತು. ಈ ಅವಧಿಯಲ್ಲಿಬ್ಯಾಂಕ್ನ ಪ್ರತಿ ಷೇರು ಮೌಲ್ಯ ( ಇಪಿಎಸ್ )2.55 ರೂ.ನಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 1.62 ರೂ. ಏರಿಕೆಯಾಗಿತ್ತು.
ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ಡಾ.ಕಿಶೋರ್ ಸನ್ಸಿ, “ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ನಿವ್ವಳ ಲಾಭ ಶೇ.57.55ರಷ್ಟು ಏರಿಕೆಯಾಗಿದ್ದು, ಬ್ಯಾಂಕ್‌ನ ಇತಿಹಾಸದಲ್ಲಿ ತ್ತೈಮಾಸಿಕ ಅವಧಿಯಲ್ಲಿ ದಾಖಲೆ ಪ್ರಮಾಣದ ನಿವ್ವಳ ಲಾಭ ಗಳಿಸಿದೆ’ ಎಂದು ಹೇಳಿದರು. “ನಿವ್ವಳ ಬಡ್ಡಿ ಆದಾಯವು ಶೇ.20.59ರಷ್ಟು ಏರಿಕೆಯಾಗಿದ್ದರೆ ಇತರೆ ಆದಾಯವು ಶೇ.114.49ರಷ್ಟು ಹೆಚ್ಚಳವಾಗಿದೆ.
ಜತೆಗೆ ನಿರ್ವಹಣಾ ಲಾಭ 752 ಕೋಟಿ ರೂ. ಸಂಗ್ರಹವಾಗಿದ್ದು, ಆ ಮೂಲಕ ಶೇ.64.05ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದರು.
Related Articles
Advertisement
ಪ್ರಸ್ತುತ 2017-18ನೇ ಸಾಲಿನ ಮೊದಲ ತ್ತೈಮಾಸಿಕದಲ್ಲಿ ನಿವ್ವಳ ಅನುತ್ಪಾದಕ ಸಾಲ ಪ್ರಮಾಣದ ಮೊತ್ತ ಶೇ.5.24ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.42ರಷ್ಟಿತ್ತು. ಅನುತ್ಪಾದಕ ಸಾಲ ಪ್ರಮಾಣಕಳೆದ ವರ್ಷದ ತ್ತೈಮಾಸಿಕ ಅವಧಿಗೆ ಹೋಲಿಸಿದರೆ ಇಳಿಕೆಯಾಗಿದೆ. ಆದರೆ ಈ ಪ್ರಮಾಣವನ್ನು ಪರಿಣಾಮಕಾರಿಯಾಗಿ ಇಳಿಕೆ ಮಾಡಲು ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 2016-17ನೇ ಸಾಲಿನಲ್ಲಿ ಬ್ಯಾಂಕ್ ಉತ್ತಮ ಸಾಧನೆ ತೋರಿದ್ದು, ಆ ಮೂಲಕ ಕೇಂದ್ರ ಸಚಿವಾಲಯ, ನಾನಾ ಖಾಸಗಿ ಕಂಪನಿಗಳಿಂದ 35ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ಭಾಜನವಾಗಿದೆ’ ಎಂದು ತಿಳಿಸಿದರು.ಬ್ಯಾಂಕ್‌ನ ಕಾರ್ಯಕಾರಿ ನಿರ್ದೇಶಕರಾದ ಬಿ.ಎಸ್.ರಾಮರಾವ್, ವೈ.ನಾಗೇಶ್ವರರಾವ್ ಉಪಸ್ಥಿತರಿದ್ದರು.