ನವ ದೆಹಲಿ : ಅಧಿಕಾರ ಸ್ವೀಕರಿಸುತ್ತಿದ್ದಂತೆ ನೂತನ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯಾ ಕೋವಿಡ್ ಸೋಂಕಿನ ಎರಡನೇ ಅಲೆಯ ಸಂದರ್ಭದಿಂದಾಗಿ ಉಂಟಾದ ಸಮಸ್ಯೆಗಳನ್ನು ಎದುರಿಸುವುಕ್ಕಾಗಿ 23,000 ಕೋಟಿ ವಿಶೇಷ ಪ್ಯಾಕೇಜ್ ನನ್ನು ಘೋಷಿಸಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದ ಜನರು ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಭಯಭೀತರಾಗಿದ್ದಾರೆ : ಜಾನ್ ಬಾರ್ಲಾ
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 23, 000 ಕೋಟಿ ಪ್ಯಾಕೇಜ್ ನಲ್ಲಿ ಸುಮಾರು 15,000 ಕೋಟಿ ಸಮಸ್ಯೆಯನ್ನು ಕೇಂದ್ರದಿಂದ ಬಳಕೆ ಮಾಡಲಾಗುತ್ತದೆ. ಉಳಿದದ್ದನ್ನು ರಾಜ್ಯಗಳ ವಿನಿಯೋಗಕ್ಕೆ ನೀಡಲಾಗುತ್ತದೆ. ಎರಡನೇ ಅಲೆಯಿಂದಾಗಿ ಎದುರಾದ ಸಮಸ್ಯೆಗಳನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಈ ವಿಶೇಷ ಪ್ಯಾಕೇಜ್ ನನ್ನು ಬಳಕೆ ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ, ಆರೋಗ್ಯ ಸಚಿವಾಲಯದ ಮುಂದಿನ ಒಂಬತ್ತು ತಿಂಗಳುಗಳ ಕಾರ್ಯತಂತ್ರಗಳ ಬಗ್ಗೆ ಮಾಹಿತಿ ನೀಡಿದ ಅವರು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಒಂದಾಗಿ ಕಾರ್ಯೋನ್ಮುಖರಾಗಬೇಕಿದೆ. ರಾಜ್ಯಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದಿದ್ದಾರೆ.
ಇನ್ನು, ಸಂಭಾವ್ಯ ಕೋವಿಡ್ ಸೋಂಕಿನ ಮೂರನೆ ಅಲೆಯನ್ನು ಎದುರಿಸಲು ದೇಶದ 736 ಜಿಲ್ಲೆಗಳಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ಕೋವಿಡ್ ಪರಿಹಾರ ನಿಧಿಯಡಿ 20,000 ಐಸಿಯು ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ : ಕೋವಿಡ್: ರಾಜ್ಯದಲ್ಲಿಂದು 3344 ಸೋಂಕಿತರು ಗುಣಮುಖ; 2530 ಹೊಸ ಪ್ರಕರಣ ಪತ್ತೆ