Advertisement

ಗೆದ್ದು ಬಾ ಇಂಡಿಯಾ, ಬರೋಬ್ಬರಿ 2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್!

05:37 PM Jun 17, 2017 | Sharanya Alva |

ನವದೆಹಲಿ: ಭಾರತ ಬಾಂಗ್ಲಾದೇಶವನ್ನು 9 ವಿಕೆಟ್ ಗಳ ಅಂತರದಿಂದ ಮಣಿಸಿ ಫೈನಲ್ ಗೇರಿದ್ದು, ಭಾನುವಾರ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಎದುರಿಸಲು ಸಜ್ಜಾಗಿದೆ. ಮತ್ತೊಂದೆಡೆ ಭಾರತ, ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಬರೋಬ್ಬರಿ 2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಹೌದು ಇಂಗ್ಲೆಂಡ್ ನಲ್ಲಿ ಕಾನೂನುಬದ್ಧವಾಗಿರುವ ಬೆಟ್ಟಿಂಗ್ ಹಿನ್ನೆಲೆಯಲ್ಲಿ ಭಾನುವಾರದ ಭಾರತ ಪಾಕ್ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಾಟಕ್ಕೆ 2 ಸಾವಿರ ಕೋಟಿಗೂ ಅಧಿಕ ಬೆಟ್ಟಿಂಗ್ ವಹಿವಾಟು ನಡೆದಿದೆ ಎಂದು ಅಖಿಲ ಭಾರತ ಗೇಮಿಂಗ್ ಫೆಡರೇಷನ್(ಎಐಜಿಎಫ್) ಅಂದಾಜಿಸಿರುವುದಾಗಿ ವರದಿ ವಿವರಿಸಿದೆ.

ಎಂದಿನಂತೆ ಭಾರತವೇ ಬುಕ್ಕಿಗಳ ಫೇವರೆಟ್ ತಂಡವಾಗಿದೆ. ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಗೆದ್ದರೆ ಭಾರತದಲ್ಲಿ 100 ರೂ.ಗೆ 147 ರೂಪಾಯಿ ಸಿಗಲಿದೆ. ಒಂದು ವೇಳೆ ಎದುರಾಳಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದರೆ ನೂರಕ್ಕೆ 300 ರೂಪಾಯಿ ನಿಗದಿಯಾಗಿದೆ ಎಂದು ತಿಳಿಸಿದೆ.

ಒಂದು ವರ್ಷದಲ್ಲಿ ಭಾರತ ತಂಡ ಆಡುವ ಒಟ್ಟು ಪಂದ್ಯಗಳ  ಮೇಲೆ 2 ಲಕ್ಷ ಕೋಟಿ ರೂಪಾಯಿ ಬೆಟ್ಟಿಂಗ್ ನಡೆಯುತ್ತದೆ ಎಂದು ಎಐಜಿಎಫ್ ಸಿಇಓ ರೋಲ್ಯಾಂಡ್ ಲ್ಯಾಂಡರ್ಸ್ ಅಂದಾಜಿಸಿದ್ದಾರೆ. ಅಲ್ಲದೇ ಸುಮಾರು 10 ವರ್ಷಗಳ ಬಳಿಕ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ತಂಡ ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಅತೀ ಹೆಚ್ಚಿನ ಬೆಟ್ಟಿಂಗ್ ನಡೆಯಲಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next