Advertisement

ಸುಶಾಂತ್ ಸಿಂಗ್ ಖಾತೆಯಿಂದ 15 ಕೋಟಿ ವರ್ಗಾವಣೆ: ಗೆಳತಿ ರಿಯಾ ಬಂಧನ ಸಾಧ್ಯತೆ?

06:25 PM Jul 30, 2020 | Nagendra Trasi |

ಮುಂಬೈ: ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಖಾತೆಯಿಂದ ಅನುಮಾನಾಸ್ಪದವಾಗಿ ಸುಮಾರು 15 ಕೋಟಿ ರೂಪಾಯಿಯಷ್ಟು ಹಣದ ವರ್ಗಾವಣೆಯಾಗಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಹಿನ್ನೆಲೆಯಲ್ಲಿ ಸುಶಾಂತ್ ಗೆಳತಿ ರಿಯಾ ತನ್ನ ಮಗನಿಗೆ ಮೋಸ ಮಾಡಿದ್ದು, ಸಿಂಗ್ ಖಾತೆಯಿಂದ ಅಪಾರ ಹಣವನ್ನು ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಸುಶಾಂತ್ ತಂದೆ ರಿಯಾ ವಿರುದ್ಧ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಪೂರ್ಣ ಪ್ರಮಾಣದ ವಿವರ ನೀಡುವಂತೆ ಜಾರಿ ನಿರ್ದೇಶನಾಲಯ ತಿಳಿಸಿದೆ ಎಂದು ವರದಿ ವಿವರಿಸಿದೆ.

ಇದನ್ನೂ ಓದಿ:ಸುಶಾಂತ್‌ ಮಾಜಿ ಗೆಳತಿ ರಿಯಾ ವಿರುದ್ಧ ನೀರಜ್‌ ಕುಮಾರ್‌ ಆಕ್ರೋಶ

ಹಣ ಲಪಟಾಯಿಸಿದ ಕೃತ್ಯದಲ್ಲಿ ರಿಯಾ ಚಕ್ರವರ್ತಿ ಸಹೋದರನೂ ಶಾಮೀಲಾಗಿರುವುದಾಗಿ ಸುಶಾಂತ್ ತಂದೆ ಆರೋಪಿಸಿದ್ದಾರೆ. ಕಳೆದ ತಿಂಗಳು ನಟ ಸುಶಾಂತ್ ಸಿಂಗ್ ಮುಂಬೈನ ಅಪಾರ್ಟ್ ಮೆಂಟ್ ನಲ್ಲಿ ನೇಣಿಗೆ ಶರಣಾಗಿದ್ದರು.

ರಿಯಾ ಹಾಗೂ ಕುಟುಂಬಸ್ಥರ ವಿರುದ್ಧ ಸುಶಾಂತ್ ತಂದೆ ಕೆಕೆ ಸಿಂಗ್ ದಾಖಲಿಸಿರುವ ಎಫ್ ಐಆರ್ ವರದಿಯ ವಿವರ ಕೊಡುವಂತೆ ಇ.ಡಿ. ಅಧಿಕಾರಿಗಳು ಬಿಹಾರ ಪೊಲೀಸರಲ್ಲಿ ಕೇಳಿದ್ದಾರೆ. ಎಫ್ ಐಆರ್ ನಲ್ಲಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಹಾಗೂ ಕುಟುಂಬದ ಇತರ ಸದಸ್ಯರು ಸೇರಿ ಆರು ಮಂದಿಯ ಹೆಸರು ದಾಖಲಾಗಿದೆ.

Advertisement

ಇದನ್ನೂ ಓದಿ:ಯಾರೀಕೆ ಸುಶಾಂತ್ ಸಖಿ ರಿಯಾ ಚಕ್ರವರ್ತಿ ; ಏನಿದು ಪ್ರಕರಣ: ಇಲ್ಲಿದೆ ಫುಲ್ ಡಿಟೇಲ್ಸ್

ಸುಶಾಂತ್ ಖಾತೆಯಲ್ಲಿದ್ದ ಸುಮಾರು 15 ಕೋಟಿ ರೂಪಾಯಿ ಹಣ ವರ್ಗಾವಣೆ, ವ್ಯವಹಾರ ನಡೆದಿದ್ದು, ಇದನ್ನು ಹಣ ದುರುಪಯೋಗ ಪ್ರಕರಣದಡಿಯಲ್ಲಿ ತನಿಖೆ ನಡೆಸಬೇಕಾದ ಅಗತ್ಯವಿದೆಯೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಸೂಕ್ತ ಸಾಕ್ಷ್ಯಾಧಾರಗಳು ದೊರೆತಲ್ಲಿ ಗೆಳತಿ ರಿಯಾ ಬಂಧನ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಸುಶಾಂತ್ ಸೂಸೈಡ್ ಅಲ್ಲ, ದಾವೂದ್ ತಂಡದಿಂದ ಹತ್ಯೆ?ಮಾಜಿ ರಾ ಅಧಿಕಾರಿ ಆರೋಪವೇನು

Advertisement

Udayavani is now on Telegram. Click here to join our channel and stay updated with the latest news.

Next