Advertisement

12,000 ಕೋಟಿ ಪ್ರಚಾರ!

12:30 AM Jan 24, 2019 | |

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಮನವೊಲಿಸಲು ಸೋಷಿಯಲ್‌ ಮೀಡಿಯಾ ಪ್ರಮುಖ ವೇದಿಕೆಯಾಗಿರಲಿದೆ. ಹೀಗಾಗಿ ಎಲ್ಲ ಪಕ್ಷಗಳು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಹೀರಾತು ನೀಡಲು ನಿರ್ಧರಿಸಿವೆ. 2014 ಕ್ಕೆ ಹೋಲಿಸಿದರೆ ಈ ವರ್ಷ ಸೋಷಿಯಲ್‌ ಮೀಡಿಯಾ ಜಾಹೀರಾತು ಪ್ರಮಾಣದಲ್ಲಿ ಶೇ. 150ರಷ್ಟು ಏರಿಕೆಯಾಗಲಿದೆ.

Advertisement

ಕೆಲವು ಮೂಲಗಳ ಪ್ರಕಾರ ಈ ಮಾಧ್ಯಮವೊಂದರಲ್ಲೇ 12 ಸಾವಿರ ಕೋಟಿ ರೂ. ಜಾಹೀರಾತುಗಳನ್ನು ವಿವಿಧ ಪಕ್ಷಗಳು ನೀಡಲಿವೆ. ಈ ಪೈಕಿ ಫೇಸ್‌ಬುಕ್‌ ಹೆಚ್ಚಿನ ಪಾಲನ್ನು ಕಬಳಿಸಲಿದೆ. ನಂತರದ ಸ್ಥಾನ ಟ್ವಿಟರ್‌ ಹಾಗೂ ಇತರ ಸಂಸ್ಥೆಗಳು ಗಳಿಸಲಿವೆ. ಮೂಲಗಳ ಪ್ರಕಾರ ಫೇಸ್‌ಬುಕ್‌ 10 ಸಾವಿರ ಕೋಟಿ ರೂ. ಜಾಹೀರಾತುಗಳನ್ನು ಪಡೆದರೆ, ಇತರ ಸಾಮಾಜಿಕ ಮಾಧ್ಯಮಗಳು 2 ಸಾವಿರ ಕೋಟಿ ರೂ. ಮೌಲ್ಯದ ಜಾಹೀರಾತುಗಳನ್ನು ಪಡೆಯಲಿವೆ.

ಸೋಷಿಯಲ್‌ ಮೀಡಿಯಾದಲ್ಲಿ 2018ರ ವೇಳೆಗೆ 10 ಸಾವಿರ ಕೋಟಿ ಜಾಹೀರಾತು ನೀಡ ಲಾಗುತ್ತಿತ್ತು ಎಂದು ಡೆಂಟ್ಸು ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈಗಾಗಲೇ ತಿಳಿದು ಬಂದಿದೆ. ಅಷ್ಟೇ ಅಲ್ಲ, ಈ ಸಂಸ್ಥೆಯ ಅಂದಾ ಜಿನ ಪ್ರಕಾರ 2021ರ ವೇಳೆಗೆ 24 ಸಾವಿರ ಕೋಟಿ ರೂ.ಗೆ ಈ ಮೊತ್ತ ತಲುಪಲಿದೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳು ತಮ್ಮ ಜಾಹೀರಾತು ನೀತಿಯನ್ನು ಬದಲಾವಣೆ ಮಾಡಿಕೊಂಡಿದ್ದು, ಇನ್ನಷ್ಟು ಪಾರದರ್ಶಕ ವಾಗಿವೆ. ಪ್ರದರ್ಶನಗೊಳ್ಳುತ್ತಿರುವ ಜಾಹೀ ರಾತನ್ನು ನೀಡಿದ್ದು ಯಾರು ಎಂಬುದನ್ನು ಫೇಸ್‌ಬುಕ್‌ ಪ್ರದರ್ಶಿಸುತ್ತಿದ್ದರೆ, ಗೂಗಲ್‌ ಕೂಡ ತನ್ನ ಜಾಹೀರಾತು ನೀತಿಯನ್ನು ಮರುರೂಪಿಸಿದೆ.

ಫೇಸ್‌ಬುಕ್‌ನಲ್ಲಿ ಅತಿ ಹೆಚ್ಚು ಜಾಹೀರಾತು ಪ್ರದರ್ಶನ
2014ಕ್ಕೆ ಹೋಲಿಸಿದರೆ ಶೇ. 150 ರಷ್ಟು ಹೆಚ್ಚಳ

Advertisement
Advertisement

Udayavani is now on Telegram. Click here to join our channel and stay updated with the latest news.

Next