Advertisement

ಸರಕಾರದಿಂದ ಔಷಧ ಬೆಲೆ ನಿಗದಿ: ಜನರಿಗೆ 11,000 ಕೋಟಿ ಲಾಭ

11:23 AM Jan 04, 2019 | udayavani editorial |

ಹೊಸದಿಲ್ಲಿ : ಕೇಂದ್ರ ಸರಕಾರ ಔಷಧಗಳ ಬೆಲೆಯನ್ನು ನಿಗದಿಸಿದ ಫ‌ಲವಾಗಿ ಜನರಿಗೆ ಸುಮಾರು 11,000 ಕೋಟಿ ರೂ. ಲಾಭವಾಗಿದೆ.

Advertisement

ಔಷಧಗಳ ಬೆಲೆ ಜನರ ಕೈಗೆಟಕುವಂತೆ ಮಾಡುವ ನಿಟ್ಟಿನಲ್ಲಿ ಸರಕಾರ 855 ಮುಖ್ಯ ಔಷಧಿಗಳ ಮತ್ತು ಕೆಲವು ಅತ್ಯಗತ್ಯ ವೈದ್ಯಕೀಯ ಉಪಕರಣಗಳ ಬೆಲೆಯನ್ನು ನಿಗದಿಸಿರುವುದರಿಂದ ಜನರಿಗೆ ಇಷ್ಟೊಂದು ದೊಡ್ಡ ಮೊತ್ತದ ಲಾಭವಾಗುವುದು ಸಾಧ್ಯವಾಗಿದೆ.

ಈ ವಿಷಯವನ್ನು ಇಂದು  ಕೇಂದ್ರದ ಸಹಾಯಕ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಮನ್‌ ಸುಖ್‌ ಎಲ್‌ ಮಾಂಡವೀಯ ರಾಜ್ಯಸಭೆಗೆ ತಿಳಿಸಿದರು. ಜನರಿಗೆ ಅತೀ ಅಗತ್ಯವಿರುವ ಮಹತ್ವದ ಔಷಧಿಗಳ ಬೆಲೆಯನ್ನು ಸರಕಾರ ಅಧಿಸೂಚನೆ ಹೊರಡಿಸುವ ಮೂಲಕ ನಿಗದಿಸಿದ ಪರಿಣಾಮವಾಗಿ ಜನರಿಗೆ ಕಡಿಮೆ ದರದಲ್ಲಿ ಔಷಧಗಳು ದೊರಕುವಂತಾದವು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next