ಯಾದಗಿರಿ: ಬ್ಯಾಂಕ್ ಅಧಿಕಾರಿಗಳೆಂದು ಮೊಬೈಲ್‌ಗೆ ಕರೆ ಮಾಡಿ ಗ್ರಾಹಕರೊಬ್ಬರ ಖಾತೆ ಹಾಗೂ ಎಟಿಎಂ ಕಾರ್ಡ್ ವಿವರ ಪಡೆದು ಹಣ ಲಪಟಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಹಾಪುರ ತಾಲೂಕು ಖಾನಾಪುರ ಗ್ರಾಮದ ಮರಿರಾಜ ಹೊಸಮನಿ ಹಣ ಕಳೆದುಕೊಂಡ ಗ್ರಾಹಕ. ಬ್ಯಾಂಕ್ ಅಧಿಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಮರಿರಾಜ ಹೊಸಮನಿ ಮೊಬೈಲ್‌ಗೆ ಕರೆ ಮಾಡಿ, ಅವರ ಖಾತೆ ಹಾಗೂ ಎಟಿಎಂ ಕಾರ್ಡ್ ವಿವರ ಪಡೆದು 1,08,269 ರೂ.
ಲಪಟಾಯಿಸಿದ್ದು, ಈ ಬಗ್ಗೆ ಮರಿರಾಜ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.