Advertisement

ದಿಲ್ಲಿ ಏರ್‌ಪೋರ್ಟ್‌ನಿಂದ ನೋಯ್ಡಾಗೆ 10,000 ರೂ.

08:33 AM May 16, 2020 | Hari Prasad |

ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉತ್ತರ ಪ್ರದೇಶದ ನೋಯ್ಡಾ, ಗಾಜಿಯಾಬಾದ್‌ ಅಥವಾ 250 ಕಿಮೀ ಒಳಗೆ ಪ್ರಯಾಣಿಸಬೇಕಾದರೆ ನೀವು ಟ್ಯಾಕ್ಸಿಗೆ 10 ಸಾವಿರೂ. ತೆರಲೇಬೇಕು.

Advertisement

ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ (ಯುಪಿಎಸ್‌ಆರ್‌ಟಿಸಿ) ಈ ದರವನ್ನು ವಿಧಿಸಿದೆ. ಎಸ್‌ಯುವಿ ಅಥವಾ ಯಾವುದಾದರೂ ಉತ್ತಮ ಕಾರುಗಳನ್ನು ಬುಕ್‌ ಮಾಡಿದರೆ 12 ಸಾವಿರ ರೂ. ಪಾವತಿಸಬೇಕಾಗುತ್ತದೆ.

250 ಕಿಮೀ ಅನಂತರ ಒಂದು ಕಿಲೋ ಮೀಟರ್‌ ದೂರಕ್ಕೆ 40 ರೂ. ಅಧಿಕ ಹಣ ಪಾವತಿಸಬೇಕು. ಟ್ಯಾಕ್ಸಿಯಲ್ಲಿ ಕೇವಲ ಇಬ್ಬರು ಕುಳಿತು ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಇದರ ಜತೆಗೆ ಬಸ್‌ ದರವನ್ನು ಕೂಡ ಹೆಚ್ಚಿಸಲಾಗಿದೆ. 100 ಕಿಮೀ ಒಳಗೆ ಪ್ರಯಾಣಿಸಲು ಎಸಿ ರಹಿತ ಬಸ್‌ಗೆ 1,000 ರೂ. ಮತ್ತು ಎಸಿ ಸಹಿತ ಬಸ್‌ಗೆ 1.320 ರೂ. ಟಿಕೆಟ್‌ ದರ ವಿಧಿಸಲಾಗಿದೆ. 100 ಕಿಮೀಗಿಂತ ದೂರ ಪ್ರಯಾಣಿಸಲು ಅದರ ದುಪ್ಪಟ್ಟು ದರ ಪಾವತಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next