Advertisement

ಖಾಂಡ್ಯ ಕ್ಷೇತ್ರದ ಅಭಿವೃದ್ಧಿಗೆ ಕೋಟಿ ರೂ.

02:10 PM Dec 10, 2019 | Suhan S |

ಬಾಳೆಹೊನ್ನೂರು: ಪ್ರವಾಸೋದ್ಯಮ ಇಲಾಖೆ ವತಿಯಿಂದ ಶ್ರೀ ಖಾಂಡ್ಯ ಕ್ಷೇತ್ರದಲ್ಲಿ ಯಾತ್ರಿ ನಿವಾಸ ಹಾಗೂ ದೇವಸ್ಥಾನದ ಕಾಂಪೌಂಡ್‌ ನಿರ್ಮಾಣಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಸಕ್ಕರೆಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

Advertisement

ಸಮೀಪದ ಖಾಂಡ್ಯ ಕ್ಷೇತ್ರದಲ್ಲಿ ಯಾತ್ರಿನಿವಾಸದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಈ ಹಿಂದೆ ಚಿಕ್ಕಮಗಳೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದು, ರಾಜಕಾರಣದ ಪ್ರವೇಶದಲ್ಲಿ ಅನುಭವದ ಕೊರತೆಯಿಂದ ಖಾಂಡ್ಯ ಕ್ಷೇತ್ರದ ಅಭಿವೃದ್ಧಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಖಾಂಡ್ಯ ಕ್ಷೇತ್ರದ ಋಣವನ್ನು ತೀರಿಸಬೇಕಾದ ಜವಾಬ್ದಾರಿಯಾಗಿದೆ ಎಂದರು.

ಕ್ಷೇತ್ರ ವಿಂಗಡಣೆಯಾದ ಮೇಲೆ ಖಾಂಡ್ಯ ಹೋಬಳಿ ಶೃಂಗೇರಿ ಕ್ಷೇತ್ರಕ್ಕೆ ಸೇರ್ಪಡೆಯಾಗಿದೆ. ಇದೀಗ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವನಾಗಿ ಅನುದಾನವನ್ನು ಬಿಡುಗಡೆ ಮಾಡಿಸಿ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದೆ ಎಂದರು.

ಮಲೆನಾಡಿಗರು ಸಂಸ್ಕೃತಿಸಂಪ್ರದಾಯವನ್ನು ಅಳವಡಿಸಿಕೊಂಡವರಾಗಿದ್ದಾರೆ. ವಿಶ್ವಾಸ ರಾಜಕಾರಣ ಅಳವಡಿಸಿಕೊಂಡು ಅಭಿವೃದ್ಧಿ ಮಾಡುವ ಉದ್ದೇಶವಿದೆ. ದ್ವೇಷ ರಹಿತ ರಾಜಕಾರಣ ಬಿಟ್ಟು ವಿಶ್ವಾಸ ಪೂರ್ಣ ರಾಜಕೀಯವೇ ನಮ್ಮ ಉದ್ದೇಶವಾಗಿದೆ. ಖಾಂಡ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ವಿ.ಮಂಜುನಾಥ್‌, ದೇವಸ್ಥಾನ ಮಂಡಳಿ ಸದಸ್ಯರು, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವ ಡಿ.ಎನ್‌.ಜೀವರಾಜ್‌ ಒಮ್ಮತದಿಂದ ಅಭಿವೃದ್ಧಿ ಮಾಡೋಣವೆಂದು ತಿಳಿಸಿದರು.ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಮಾತನಾಡಿ, ಪ್ರವಾಹ ಬಂದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದು, ಆ ಭರವಸೆಯನ್ನು ಸಚಿವರು ಈಡೇರಿಸಿದ್ದಾರೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ಖಾಂಡ್ಯ ಹೋಬಳಿ ಅಭಿವೃದ್ಧಿಗೆ ಸಚಿವರು ನೀಡಿದ ಸಹಕಾರವನ್ನು ಶ್ಲಾಘಿಸಿದರು. ಅಧಿಕಾರ ಶಾಶ್ವತವಲ್ಲ, ಅಭಿವೃದ್ಧಿ ಶಾಶ್ವತವೆಂದು ತುರ್ತಾಗಿ ಗುಣಮಟ್ಟದ ಕಟ್ಟಡ ಕಾಮಗಾರಿಯನ್ನು ಮಾಡಿಸಲಾಗುವುದೆಂದು ತಿಳಿಸಿದರು.

Advertisement

ಮಾಜಿ ಸಚಿವ ಡಿ.ಎನ್‌ಜಿವರಾಜ್‌, ಜಿ.ಪಂ. ಸದಸ್ಯೆ ಕವಿತಾ ಲಿಂಗರಾಜ್‌, ದೇವದಾನ ಗ್ರಾ.ಪಂ. ಅಧ್ಯಕ್ಷ ರಮೆಶ್‌, ತಾ.ಪಂ. ಸದಸ್ಯೆ ಸಾವಿತ್ರಿ ರಾಜಕುಮಾರ್‌, ಸಂಗವೇಶ್ವರಪೇಟೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ಹಾಗೂ ಬಾಳೆಹೊನ್ನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಎಂ.ಉಮೇಶ್‌ ಕಲ್ಮಕ್ಕಿ, ಮುಖಂಡರಾದ ವೆನಿಲ್ಲಾ ಭಾಸ್ಕರ್‌, ಕಾಂಡ್ಯ ಹೋಬಳಿ ಬಿಜೆಪಿ ಅಧ್ಯಕ್ಷ ಹುಯಿಗೆರೆ ರವಿ, ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಬೆಳಸೆ ಮಂಜುನಾಥ್‌, ಜಯಶೀಲ, ಉದಯ್‌ ಕುಮಾರ್‌ ಹೆಗಡೆ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗುರುಮೂರ್ತಿ ನಿರೂಪಿಸಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್‌.ವಿ. ಮಂಜುನಾಥ್‌ ಸ್ವಾಗತಿಸಿ, ಬೆಳಸೆ ರತ್ನಾಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next