Advertisement

Bihar: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಪಾಸ್- ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ, ದಂಡ

04:13 PM Jul 24, 2024 | Team Udayavani |

ಪಾಟ್ನಾ(ಬಿಹಾರ): ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಯಲ್ಲಿ ನಕಲು ವಿಚಾರ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿಹಾರ ವಿಧಾನಸಭೆ ಬುಧವಾರ (ಮಾರ್ಚ್‌ 24) ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆಯನ್ನು ಅಂಗೀಕರಿಸಿದೆ.

Advertisement

ಬಿಹಾರ ಪಬ್ಲಿಕ್‌ ಎಕ್ಸಾಮಿನೇಷನ್ಸ್‌ (PE) (Prevention of Unfair means) ಮಸೂದೆ 2024 ಅನ್ನು ಬುಧವಾರ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್‌ ಕುಮಾರ್‌ ಚೌಧರಿ ಅವರು ಮಂಡಿಸಿದ್ದು, ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ ಧ್ವನಿಮತದ ಮೂಲಕ ಮಸೂದೆಯನ್ನು ಅಂಗೀಕರಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ನಕಲು, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆ ತಡೆಗಟ್ಟುವುದು ಮುಖ್ಯ ಉದ್ದೇಶವಾಗಿದೆ. ನೂತನ ಮಸೂದೆ ಅನ್ವಯ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಯಲ್ಲಿ ಶಾಮೀಲಾದವರಿಗೆ 10 ಲಕ್ಷ ರೂ. ಭಾರೀ ದಂಡ ಮತ್ತು ಮೂರರಿಂದ ಐದು ವರ್ಷಗಳವರೆಗೆ ಜೈಲುಶಿಕ್ಷೆ ಅನುಭವಿಸಬೇಕಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next