Advertisement

ಠೇವಣಿಗೆ 20 ಸಾವಿರ ಮೊತ್ತದ 1 ರೂ. ನಾಣ್ಯ ಕೊಟ್ಟ ರಾಮದಾಸ್‌!

12:50 PM Apr 22, 2018 | Team Udayavani |

ಮೈಸೂರು: ಭಾರೀ ಪೈಪೋಟಿಯ ನಡುವೆಯೂ ಮೂರನೇ ಪಟ್ಟಿಯಲ್ಲಿ ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾದ ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಾವಿರಾರು ಕಾರ್ಯಕರ್ತರ ಜೊತೆಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.

Advertisement

ಶನಿವಾರ ವಿದ್ಯಾರಣ್ಯಪುರಂನ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ರಾಮದಾಸ್‌ ಮೆರವಣಿಗೆ ನಡೆಸಿದರು.

ವಿದ್ಯಾರಣ್ಯಪುರಂ, ಬಸವೇಶ್ವರ ರಸ್ತೆಯ ಮೂಲಕ 101 ಗಣಪತಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಬಳಿಕ ಅಗ್ರಹಾರ ವೃತ್ತ, ಸಂಸ್ಕೃತ ಪಾಠಶಾಲೆ ವೃತ್ತದ ಮೂಲಕ ಮಧ್ಯಾಹ್ನ 2.15ಕ್ಕೆ ಮಹಾ ನಗರಪಾಲಿಕೆ ಮುಖ್ಯಕಚೇರಿಗೆ ತೆರಳಿ ಚುನಾವಣಾಧಿಕಾರಿಗೆ ಎರಡು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.

ಸಂಸದ ಪ್ರತಾಪ್‌ ಸಿಂಹ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ತೋಂಟದಾರ್ಯ, ಕೆ.ಆರ್‌.ಕ್ಷೇತ್ರದ ಬಿಜೆಪಿ ಅಧ್ಯಕ್ಷ ಬಿ.ವಿ.ಮಂಜುನಾಥ್‌ ಸೇರಿದಂತೆ ಇನ್ನಿತರರು ಜತೆಗಿದ್ದರು.

ಠೇವಣಿಗೆ 1ರೂ. ನಾಣ್ಯ: ರಾಮದಾಸ್‌ ಕಚೇರಿಯಿಂದ ಕೆ.ಆರ್‌. ಕ್ಷೇತ್ರದ 56 ಸಾವಿರ ಕುಟುಂಬಗಳಿಗೆ ಒಂದು ರೂಪಾಯಿ ನಾಣ್ಯ ಕೊಟ್ಟು ಆಶೀರ್ವಾದ ಮಾಡುವಂತೆ ಬರೆದಿದ್ದ ಪತ್ರಕ್ಕೆ ಸ್ಪಂದಿಸಿ 36 ಸಾವಿರ ಮನೆಗಳಿಂದ 36 ಸಾವಿರ ರೂ. ಸಂಗ್ರಹವಾಗಿತ್ತು. ಎರಡು ಡಬ್ಬಗಳಲ್ಲಿ ಈ ನಾಣ್ಯವನ್ನು ತಂದ ರಾಮದಾಸ್‌, ಚುನಾವಣಾಧಿಕಾರಿಗೆ ಠೇವಣಿ ಹಣವಾಗಿ 20 ಸಾವಿರ ರೂ. ಮೊತ್ತದ ನಾಣ್ಯವನ್ನು ಪಾವತಿಸಿ ಗಮನಸೆಳೆದರು.

Advertisement

ನಾಮಪತ್ರ ಸಲ್ಲಿಸಲು ಮೆರವಣಿಗೆ ತೆರಳಿದ ವೇಳೆ ನೂರಾರು ನಾಲ್ಕು ಚಕ್ರದಗಾಡಿ ವ್ಯಾಪಾರಿಗಳು, ಆಟೋರಿûಾ ಚಾಲಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮೆರವಣಿಗೆಯಲ್ಲಿ ನಗರಪಾಲಿಕೆ ಸದಸ್ಯರಾದ ಮಹದೇವಮ್ಮ, ಜಗದೀಶ್‌ಗೌಡ, ಶಿವಕುಮಾರ್‌, ವನಿತಾಪ್ರಸನ್ನ, ಸೀಮಾಪ್ರಸಾದ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next