Advertisement
ಹೌದು. “ಚಮ್ಮಕ್ ಚಲ್ಲೋ’ ಎಂದು ಕರೆಯುವುದು “ಮಹಿಳೆಯರ ಘನತೆಗೆ ಮಾಡುವ ಅವಮಾನ’ ಎಂದು ಮಹಾ ರಾಷ್ಟ್ರದ ಥಾಣೆಯ ಸ್ಥಳೀಯ ನ್ಯಾಯಾಲಯವೊಂದು ಹೇಳಿದೆ. 2009ರ ಜನವರಿ 9ರಂದು ಥಾಣೆಯ ಕಿಡಿಗೇಡಿಯೊಬ್ಬ, ರಸ್ತೆಯಲ್ಲಿ ಪತಿಯೊಂದಿಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು “ಚಮ್ಮಕ್ ಚಲ್ಲೋ’ ಎಂದು ಕರೆದಿದ್ದ. ಮಹಿಳೆ ಆತನ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಕೋರ್ಟ್ ಮೊರೆ ಹೋಗಿದ್ದರು.ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಥಾಣೆ ನ್ಯಾಯಾಲಯ, ಬರೋಬ್ಬರಿ ಎಂಟು ವರ್ಷಗಳ ನಂತರ ತೀರ್ಪು ಪ್ರಕಟಿಸಿದೆ. ಮಹಿಳೆಯರನ್ನು “ಚಮ್ಮಕ್ ಚಲ್ಲೋ’ ಎಂದು ಕರೆದಿರುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಹೇಳಿರುವ ನ್ಯಾಯಾಲಯ, ಹಾಗೆ ಕರೆದಿರುವಂಥ ಕಿಡಿಗೇಡಿಗೆ ಸಾದಾ ಜೈಲು ಶಿಕ್ಷೆ ಹಾಗೂ ಒಂದು ರೂ. ದಂಡ ವಿಧಿಸಿ ತೀರ್ಪು ನೀಡಿದೆ.