Advertisement

RRTS: ರೀಜಿನಲ್‌ ರ‍್ಯಾಪಿಡ್‌ ಟ್ರಾನ್ಸಿಸ್ಟ್‌ ಸಿಸ್ಟಮ್‌ ಲೋಕಾರ್ಪಣೆಗೆ ಸಿದ್ಧ

09:04 PM Oct 18, 2023 | Pranav MS |

ಭಾರತೀಯ ರೈಲ್ವೆಯನ್ನು ಜಾಗತಿಕ ಮಟ್ಟದಲ್ಲಿ ಪರಿವರ್ತಿಸಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಂದೇ ಭಾರತ್‌ ರೈಲುಗಳ ಬಳಿಕ ಇದೀಗ ದೇಶಕ್ಕೆ ಮತ್ತೂಂದು ಸೆಮಿ ಹೈಸ್ಪೀಡ್‌ ರೈಲನ್ನು ಪರಿಚಯಿಸುತ್ತಿದೆ. ದೇಶದ ಮೊಟ್ಟ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ರೀಜಿನಲ್‌ ರ್ಯಾಪಿಡ್‌ ಟ್ರಾನ್ಸಿಸ್ಟ್‌ ಸಿಸ್ಟಮ್‌/ ಆರ್‌ಆರ್‌ಟಿಎಸ್‌)ಯ ಈ ರೈಲನ್ನು ದೆಹಲಿ-ಗಾಜಿಯಾಬಾದ್‌-ಮೀರತ್‌ ಸೇರಿದ 3 ವಲಯದಲ್ಲಿ ಮೊದಲಿಗೆ ನಿಯೋಜಿಸಲು ಉದ್ದೇಶಿಸಲಾಗಿದೆ. ಇದರ ಮೊದಲ ವಿಭಾಗದ ಕಾರ್ಯಾಚರಣೆಗೆ ಪ್ರಧಾನಿ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ.

Advertisement

ಮೊದಲ ಹಂತದಲ್ಲಿ
ಘಾಜಿಯಾಬಾದ್‌ನ ದುಹೈ ಹಾಗೂ ಸಾಹಿದಾಬಾದ್‌ನ ನಡುವೆ ಮೊದಲ ಸಂಚಾರ
17 ಕಿಮೀ- ಇಷ್ಟು ದೂರ
05 ನಿಲ್ದಾಣಗಳು

ಮೆಟ್ರೋ ರೀತಿಯ ಯೋಜನೆ ?
ನಗರಗಳ ಒಳಗಿನ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿರುವ ಆರ್‌ಆರ್‌ಟಿಎಸ್‌ ಈಗಾಗಲೇ ಅಸ್ತಿತ್ವದಲ್ಲಿರುವ ಮೆಟ್ರೋನಂತೆಯೇ ಅನಿಸಿದರೂ, ಮೆಟ್ರೋಗಿಂತ ಭಿನ್ನವಾಗಿದೆ. ವಂದೇ ಭಾರತ್‌ ರೈಲುಗಳಂತೆಯೇ ವಿಶಿಷ್ಟ ವ್ಯವಸ್ಥೆ, ವಿನ್ಯಾಸವನ್ನೂ ಒಳಗೊಂಡಿದೆ. 2025ರ ವೇಳೆಗೆ ದೆಹಲಿಯಿಂದ -ಮೀರತ್‌ವರೆಗಿನ ಸಂಪೂರ್ಣ 82 ಕಿ.ಮೀ. ವ್ಯಾಪ್ತಿಯ ಕಾರಿಡಾರ್‌ನಲಿಯೂ ಈ ರೈಲು ಕಾರ್ಯಾಚರಣೆ ನಡೆಸುವ ನಿರೀಕ್ಷೆ ಇದೆ.

30,274 ಕೋಟಿ ರೂ.
ಯೋಜನೆಯ ವೆಚ್ಚ

160 ಕಿ.ಮೀ
ಗಂಟೆಗೆ ರೈಲು ಸಂಚರಿಸುವ ವೇಗ

Advertisement

ರೈಲಿನ ವಿಶೇಷತೆ
ಪ್ರತಿ 15 ನಿಮಿಷಕ್ಕೊಂದು ರೈಲು
ಪ್ರೀಮಿಯಂ ಕ್ಲಾಸ್‌ನ ಬೋಗಿಗಳು
ಮಿನಿ ಸ್ಕ್ರೀನ್‌ ಹಾಗೂ ವೈಫೈ
ಮೊಬೈಲ್‌ಚಾರ್ಜಿಂಗ್‌ ಬೋರ್ಡ್‌
ಲಗೇಜ್‌ ಕ್ಯಾರಿಯರ್ಸ್‌ ಸೌಲಭ್ಯ
ಸಿಸಿಟಿವಿ ಅಳವಡಿಕೆ
ಮಹಿಳೆಯರಿಗೆ ವಿಶೇಷ ಬೋಗಿ

 

Advertisement

Udayavani is now on Telegram. Click here to join our channel and stay updated with the latest news.

Next