Advertisement

ಮುಂಬೈ ಸಂಸ್ಥೆಗೆ ಬ್ರಿಟನ್‌ ರಾಜಕುಮಾರ ಸಹಾಯ

08:15 AM Apr 11, 2018 | Karthik A |

ಲಂಡನ್‌: ಬ್ರಿಟನ್‌ ರಾಜಕುಮಾರ ಹ್ಯಾರಿ ಮತ್ತು ಮೆಘನ್‌ ಮಾರ್ಕ್ಲೆ ಜೋಡಿಯು ಮುಂದಿನ ತಿಂಗಳು ನಡೆಯಲಿರುವ ತಮ್ಮ ವಿವಾಹದ ವೇಳೆ ತಮಗೆ ಬರಬಹುದಾದ ಉಡುಗೊರೆಗಳನ್ನು ಮುಂಬೈನ ಸಮಾಜ ಸೇವಾ ಸಂಸ್ಥೆಯೊಂದಕ್ಕೆ ದೇಣಿಗೆ ನೀಡಲು ನಿರ್ಧರಿಸಿದೆ. ಒಟ್ಟು ಏಳು ಧರ್ಮಾರ್ಥ ಸೇವಾ ಸಂಸ್ಥೆಗಳನ್ನು ಖುದ್ದಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಈ ಭಾವೀ ದಂಪತಿ. ಆ ಪೈಕಿ ಮುಂಬೈನಲ್ಲಿ ಮಹಿಳೆಯರ ಪ್ರಗತಿಗಾಗಿ ಶ್ರಮಿಸುತ್ತಿರುವ ಮೈನಾ ಮಹಿಳಾ ಫೌಂಡೇಷನ್‌ ಕೂಡ ಒಂದು. ಇದರ ಸೇವೆಯನ್ನು ಕಳೆದ ವರ್ಷ ಭಾರತಕ್ಕೆ ಬಂದಿದ್ದಾಗ ಕಣ್ಣಾರೆ ನೋಡಿದ್ದ ಹ್ಯಾರಿ – ಮೆಘನ್‌, ಇದೀಗ, ತಮ್ಮ ವಿವಾಹಕ್ಕೆ ಉಡುಗೊರೆ ನೀಡಬಯಸುವವರು ಉಡುಗೊರೆ ಬದಲು ದೇಣಿಗೆಯ ರೂಪದಲ್ಲಿ ಮೈನಾ ಸಂಸ್ಥೆಗೆ ದೇಣಿಗೆ ನೀಡಬೇಕೆಂದು ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next