Advertisement

ತಾಂತ್ರಿಕ ದೋಷ : ಭಾರತ ಸೇರಿ ಹಲವು ದೇಶಗಳಲ್ಲಿ ಮಾರಾಟವಾದ ಎನ್ ಫೀಲ್ಡ್ ಬೈಕ್ ಗಳು ವಾಪಾಸ್.!

08:51 PM May 27, 2021 | Team Udayavani |

ನವ ದೆಹಲಿ : ಭಾರತ, ಥೈಲ್ಯಾಂಡ್, ಇಂಡೋನೇಷ್ಯಾ, ಫಿಲಿಪೈನ್ಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಮಲೇಷ್ಯಾದಲ್ಲಿ ಮಾರಾಟವಾದ 2,36,966 ಯುನಿಟ್ಸ್ ಮೆಟೆರ್, ಬುಲೆಟ್ ಮತ್ತು ಕ್ಲಾಸಿಕ್ 350 ಗಳನ್ನು ರಾಯಲ್ ಎನ್‌ ಫೀಲ್ಡ್ ಸಂಸ್ಥೆ ಹಿಂಪಡೆದಿದೆ  ಎಂಬ ವರದಿಯಾಗಿದೆ.

Advertisement

ವಾಹನಗಳ ಕಾರ್ಯಕ್ಷಮತೆಯನ್ನು ಕಡಿಮೆ ಮಾಡಲು ಮತ್ತು ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ ಗೆ ಕಾರಣವಾಗುವ ಬೈಕ್‌ ಗಳ ಇಗ್ನಿಷನ್ ಕಾಯಿಲ್‌ ನಲ್ಲಿ ದೋಷಗಳು ಕಂಡು ಬಂದ ಕಾರಣ ಹಿಂಪಡೆಯಲಾಗಿದೆ ಎಂದು ತಯಾರಕರು ಹೇಳಿದ್ದಾರೆ.

ಇದನ್ನೂ ಓದಿ : ಮದ್ಯದಂಗಡಿ ಮುಂದೆ ಮಕ್ಕಳನ್ನೂ ಕ್ಯೂ ನಿಲ್ಲಿಸಿದ ಮದ್ಯ ಪ್ರಿಯರು

ಡಿಸೆಂಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ಕಂಪನಿಯ ಬಾಹ್ಯ ಸರಬರಾಜುದಾರರಿಂದ ಪಡೆದ ಕೆಲವು ಬೈಕ್ ಗಳಲ್ಲಿ ದೋಷವನ್ನು ಗುರುತಿಸಲಾಗಿದೆ ಎಂದು ಕೂಡ ತಿಳಿಸಿರುವುದಾಗಿ ವರದಿಯಾಗಿದೆ.

ಡಿಸೆಂಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ತಯಾರಿಸಿದ ಮತ್ತು ಮಾರಾಟವಾದ ಮೆಟೆರ್  ಮತ್ತು ಕ್ಲಾಸಿಕ್ ಮತ್ತು ಬುಲೆಟ್ ಜನವರಿ ಮತ್ತು ಏಪ್ರಿಲ್ 2021 ರ ನಡುವೆ ಮಾರಾಟ ಮಾಡಲ್ಪಟ್ಟಿವೆ.

Advertisement

ರಾಯಲ್ ಎನ್‌ ಫೀಲ್ಡ್ ನ  ಸರ್ವೀಸ್ ಟೀಮ್ ಹಾಗೂ ಸ್ಥಳೀಯ ಮಾರಾಟಗಾರರು ಗ್ರಾಹಕರನ್ನು  ವಾಹನದ ಗುರುತಿನ ಸಂಖ್ಯೆ (ವಿಐಎನ್) ಆಧರಿಸಿ ತಲುಪುವ ಕಾರ್ಯವನ್ನು ಮಾಡುತ್ತಾರೆ. ಇನ್ನು ಗ್ರಾಹಕರು ತಮ್ಮ ಸ್ಥಳೀಯ ರಾಯಲ್ ಎನ್‌ ಫೀಲ್ಡ್ ವರ್ಕ್ ಶಾಪ್  ಗಳಲ್ಲಿ ಪರಿಶೀಲಿಸಿಕೊಳ್ಳಬಹುದು ಅಥವಾ ರಾಯಲ್ ಎನ್‌ ಫೀಲ್ಡ್ ನ  1800 210 007 ಗೆ ಕರೆ ಮಾಡಿ ತಮ್ಮ ಮೋಟಾರ್  ಸೈಕಲ್ ದೋಷಪೂರಿತವಾಗಿವೆಯೇ ಎನ್ನುವುದನ್ನು ದೃಢಿಕರಿಸಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ : ಗೋವಾ : ಸಾವಂತ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ : ಗಿರೀಶ್ ಚೋಡಣಕರ್

Advertisement

Udayavani is now on Telegram. Click here to join our channel and stay updated with the latest news.

Next