Advertisement

IPL ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್ ಸಿಬಿಗೆ 23 ರನ್‌ಗಳ ಜಯ

07:33 PM Apr 15, 2023 | Team Udayavani |

ಬೆಂಗಳೂರು : ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು 23 ರನ್‌ಗಳ ಜಯ ಸಾಧಿಸಿದೆ.ಆರ್ ಸಿಬಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡನೇ ಜಯ ತನ್ನದಾಗಿಸಿಕೊಂಡಿತು.

Advertisement

ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರ್ ಸಿಬಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್ ಸಿಬಿ ಬ್ಯಾಟಿಂಗ್ ನಲ್ಲಿ ಕೊಹ್ಲಿ 50 ರನ್ ಗಳಿಸಿ ಔಟಾದರು. ನಾಯಕ ಡು ಪ್ಲೆಸಿಸ್ 22, ಮಹಿಪಾಲ್ ಲೋಮ್ರೋರ್ 26, ಮ್ಯಾಕ್ಸ್‌ವೆಲ್ 24, ಶಹಬಾಜ್ ಅಹ್ಮದ್ ಔಟಾಗದೆ 20, ಅನುಜ್ ರಾವತ್ ಔಟಾಗದೆ 15 ರನ್ ಕೊಡುಗೆ ಸಲ್ಲಿಸಿದರು.

ಡೆಲ್ಲಿ 2 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ಡೇವಿಡ್ ವಾರ್ನರ್ 19ಕ್ಕೆ ಆಟ ಮುಗಿಸಿದರು., 50 ರನ್ ಗಳಿಸಿದ್ದ ವೇಳೆ ಮನೀಶ್ ಪಾಂಡೆ ಅವರನ್ನು ಹಸರಂಗ lbw ಮಾಡಿದರು.ಅಕ್ಷರ್ ಪಟೇಲ್ 21, ಅಮನ್ ಹಕೀಮ್ ಖಾನ್ 18 ರನ್ ಮತ್ತು ಕೊನೆಯಲ್ಲಿ ಅನ್ರಿಚ್ ನಾರ್ಟ್ಜೆ ಔಟಾಗದೆ 23 ರನ್ ಗಳಿಸಿದರು. ಉಳಿದ ಆಟಗಾರರು ಒಂದಂಕಿ ದಾಟಲಿಲ್ಲ. ಪೃಥ್ವಿ ಶಾ,ಮಿಚೆಲ್ ಮಾರ್ಷ್,ಯಶ್ ಧುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಆರ್ ಸಿಬಿ ಬೌಲಿಂಗ್ ನಲ್ಲಿ ವಿಜಯ್ ಕುಮಾರ್ ವೈಶಾಕ್ 3 ರನ್ ಗಳಿಸಿದರು. ಮೊಹಮ್ಮದ್ ಸಿರಾಜ್ 2 ಮತ್ತು ಪಾರ್ನೆಲ್, ಹಸರಂಗ, ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next