Advertisement

RCB: ಕೊಹ್ಲಿ ಗೈರಲ್ಲಿ ಆರ್‌ಸಿಬಿ ಅಭ್ಯಾಸ ಆರಂಭ 

10:17 PM Mar 14, 2024 | Team Udayavani |

ಬೆಂಗಳೂರು: ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಉದ್ಘಾಟನಾ ಪಂದ್ಯ ಆಡಲಿರುವ ಆರ್‌ಸಿಬಿ ಬೆಂಗಳೂರಿನಲ್ಲಿ ತನ್ನ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಆದರೆ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ಗೈರು ಎದ್ದುಕಂಡಿತು. ಅವರು ತಂಡವನ್ನು ಕೂಡಿಕೊಳ್ಳಲು ಇನ್ನೂ ಕೆಲವು ದಿನಗಳಾಗುತ್ತವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Advertisement

ಆರ್‌ಸಿಬಿಯ ಬಹುತೇಕ ದೇಶೀಯ ಕ್ರಿಕೆಟಿಗರು ಶಿಬಿರದಲ್ಲಿ ಕಾಣಿಸಿಕೊಂಡರು. ನಾಯಕ ಫಾ ಡು ಪ್ಲೆಸಿಸ್‌, ಅಲ್ಜಾರಿ ಜೋಸೆಫ್ ಕೂಡ ಇದ್ದರು. ತಂಡದ ನೂತನ ಕೋಚ್‌ ಆ್ಯಂಡಿ ಫ್ಲವರ್‌, ಡೈರೆಕ್ಟರ್‌ ಆಫ್ ಕ್ರಿಕೆಟ್‌ ಮೋ ಬೋಬಾಟ್‌ ಉಸ್ತುವಾರಿ ಹೊತ್ತಿದ್ದರು.

ಈ ಸಂದರ್ಭದಲ್ಲಿ ಮಾತಾಡಿದ ಫಾ ಡು ಪ್ಲೆಸಿಸ್‌, “ಆ್ಯಂಡಿ ಫ್ಲವರ್‌ ಅವರನ್ನು ಕೋಚ್‌ ಆಗಿ ಪಡೆದದ್ದು ನಿಜಕ್ಕೂ ನಮ್ಮ ತಂಡದ ಅದೃಷ್ಟ. ಅವರೋರ್ವ ಅಸಾಮಾನ್ಯ ತರಬೇತುದಾರ. ವಿಶಾಲ ಹೃದಯಿ ಕೂಡ ಹೌದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next