Advertisement

ಶಾಂತಿ ಕದಡುವವರಿಗೆ ರೌಡಿಶೀಟ್‌ ಓಪನ್

11:45 AM Jul 25, 2022 | Team Udayavani |

ಮಾದನಹಿಪ್ಪರಗಿ: ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ತಮ್ಮ ಬೆಳೆ ಬೇಯಿಸಿ ಕೊಳ್ಳುತ್ತಿರುವ, ಸಾರ್ವಜನಿಕ ಸ್ಥಳಗಳಲ್ಲಿ ಜೂಜು ಮಟಕಾ ಇತರೆ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡವರಿಗೆ ಮುಲಾಜಿಲ್ಲದೇ ರೌಡಿಶೀಟ್‌ ಓಪನ್‌ ಮಾಡಲಾಗುವುದು ಎಂದು ಸ್ಥಳೀಯ ಪೊಲೀಸ್‌ ಠಾಣೆಯ ಪಿಎಸ್‌ಐ ದಿನೇಶ ಹೇಳಿದರು.

Advertisement

ಪೊಲೀಸ್‌ ಠಾಣೆಯಲ್ಲಿ ನಡೆದ ದಲಿತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿ ತಿಂಗಳ ನಾಲ್ಕನೇ ರವಿವಾರ ದಲಿತರ ದಿನ ಆಚರಿಸಲಾಗುವುದು. ಕಾನೂನು ಎಲ್ಲರಿಗೂ ಒಂದೇ ಆಗಿದೆ. ವ್ಯಕ್ತಿ ಎಷ್ಟೇ ಪ್ರಭಾವಿ ಆದರೂ ಸರಿ ಕಾನೂನು ಪಾಲಿಸಲೇಬೇಕು. ದಲಿತರು ಈಗ ಪ್ರಜ್ಞಾನವಂತರಾಗಿದ್ದಾರೆ. ಇಲ್ಲಿ ಎಲ್ಲರೂ ಸಹೋದರತೆ, ಸಹಬಾಳ್ವೆಯಿಂದ ಬದುಕುತ್ತಿದ್ದಾರೆ ಎಂದರು.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿವವರ, ರೌಡಿಸಂ, ದಲಿತರ ಮೇಲೆ ದಬ್ಟಾಳಕೆ ಮಾಡುವರ ಬಗ್ಗೆ ಮಾಹಿತಿ ನೀಡಿ ಅಂತವರ ಮೇಲೆ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು. ಠಾಣೆಗೆ ಬರುವ ಬಡವರ ದಲಿತರ ಕಂಪ್ಲೇಟ್‌ ಗಳು ಬಂದಾಗ ಅವರನ್ನು ಆದಷ್ಟು ತಿಳಿಸಿ ಸಮಾಜಿಯಿಸಿ ಕಳುಹಿಸಿ ಕೊಡುವ ಪ್ರಯತ್ನ ಮಾಡುತ್ತೇವೆ. ಎಫ್‌ಐಆರ್‌ ಮಾಡಲೆಬೇಕು ಎಂದರೆ ಅನಿವಾರ್ಯ. ಮುಂದೆ ಕೋರ್ಟ ಕಚೇರಿ ಅಂತ ಅಲೆದು ದುಡ್ಡು ಮತ್ತು ಸಮಯ ಹಾಳು ಮಾಡಿಕೊಂಡು ವ್ಯರ್ಥ ಆಗುವುದು ಬೇಡ ಎಂಬುದು ನನ್ನ ವಿಚಾರ ಎಂದರು.

ಈ ಸಂದರ್ಭದಲ್ಲಿ ಇಕ್ಕಳಕಿ ಗ್ರಾಮದ ದಲಿತ ಮುಖಂಡ ಭೀಮಾಶಂಕರ ಕದಮ್‌ ಮಾತನಾಡಿದರು. ಮುಖಂಡ ಶಾಂತಮಲ್ಲ ಕೆರೂರ, ಸ್ಥಳೀಯ ಗ್ರಾಪಂ ಉಪಾಧ್ಯಕ್ಷ ಚೆನ್ನಪ್ಪ ಹಾಲೆನವರ್‌, ಶಿವಲಿಂಗಪ್‌ ಮಾತಂಗಿ, ಹರಿದಾಸ ಹಜಾರೆ, ವಿಶ್ವನಾಥ ಕೊಂಕಾಟೆ, ಅರ್ಜುನ ಇಂಗಳೆ ಭಾಗಣ್ಣ ಕುರನೂರೆ, ನಾಗೇಂದ್ರ ಹಲಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next