ತುಮಕೂರು: ರೋಟಾ ವೈರಸ್ ಲಸಿಕೆಯಿಂದ ಕನಿಷ್ಠ ಐದು ಲಕ್ಷ ಶಿಶು ಮರಣ ತಡೆಗಟ್ಟಬಹುದು ಎಂದು ಮಕ್ಕಳ ತಜ್ಞೆ ಹಾಗೂ ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಎಂ. ರಜನಿ ತಿಳಿಸಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಏರ್ಪಡಿಸಿದ್ದ ರೋಟಾ ವೈರಸ್ ಲಸಿಕೆ ಪರಿಚಯ ಕಾರ್ಯ ಕ್ರಮವನ್ನು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಾಟಲಿ ಹಾಲು ಒಳ್ಳೆಯದಲ್ಲ: ರೋಟಾ ವೈರಸ್ ಪ್ರಕರಣ ಡಿಸೆಂಬರ್ ಮತ್ತು ಜನವರಿಯಲ್ಲಿ ಹೆಚ್ಚಾಗಿ ಬರುತ್ತದೆ. ಮಗುವಿಗೆ ಬಾಟಲಿ ಹಾಲು ನೀಡು ವುದರಿಂದ ವೈರಸ್ ಆಕ್ರಮಿಸಿಕೊಳ್ಳುತ್ತದೆ. ತಾಯಿ ಎದೆಹಾಲು ಉಣಿಸುವುದರಿಂದ ವೈರಸ್ ತಡೆಗಟ್ಟ ಬಹುದು ಎಂದರು.
ರೋಟಾ ವೈರಸ್‌ಗೆ ಔಷಧಿ ಇಲ್ಲ. ಆದರೆ ಬರದಂತೆ ತಡೆಗಟ್ಟುವ ಲಸಿಕೆಯಿದ್ದು, ಮಗು ಜನಿಸಿದ ನಂತರ 6, 10 ಹಾಗೂ 14 ನೇ ವಾರದಲ್ಲಿ ಲಸಿಕೆ ಹಾಕಿಸಿ ಮಗುವಿನ ಸಾವು ತಪ್ಪಿಸಬೇಕು. ಮಗು ಅಳುತ್ತಿದ್ದರೆ ಅಥವಾ ಚಟುವಟಿಕೆ ಯಿಂದಿಲ್ಲದಿದ್ದರೆ ಲಸಿಕೆ ಹಾಕಬಾರದು ಎಂದು ತಿಳಿಸಿದರು. ಒಂದು ಶಿಶು ಮರಣ ತಪ್ಪಿಸಿದರೆ ಜಿಲ್ಲಾ ಶಿಶು ಮರಣ ಪ್ರಮಾಣ ಕಡಿಮೆಯಾಗಿ ಜಿಲ್ಲೆಗೆ ಹೆಮ್ಮೆಯ ಗರಿ ಮೂಡುತ್ತದೆ ಎಂದು ನರ್ಸಿಂಗ್ ವಿದ್ಯಾರ್ಥಿ ನಿಯರಿಗೆ ಕಿವಿಮಾತು ಹೇಳಿದರು.
ಲಸಿಕೆ ಸಾರ್ವತ್ರಿಕವಾಗಿ ಲಭ್ಯ: ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಿಕಾ ಮಾತನಾಡಿ, ರೋಟಾ ವೈರಸ್‌ನಿಂದ ಉಂಟಾಗುವ ಅತಿಸಾರ ಬೇಧಿ ವಿರುದ್ಧ ರಕ್ಷಣೆ ನೀಡುವ ರೋಟಾ ವೈರಸ್ ಲಸಿಕೆ ಸಾರ್ವತ್ರಿಕವಾಗಿ ಲಭ್ಯವಿದ್ದು, ಇದರ ಸದುಪ ಯೋಗ ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿ ದರು. ಆರು ವರ್ಷದಲ್ಲಿ ನಾಲ್ಕು ರೋಗಗಳಿಂದ ಮುಕ್ತ ಗೊಳಿಸಲು ಲಸಿಕೆಯಿಂದ ಸಾಧ್ಯವಾಗಿದೆ. ಆಶಾ ಕಾರ್ಯಕರ್ತೆಯರು ಗ್ರಾಮೀಣ ಮಹಿಳೆ ಯರಿಗೆ ರೋಟಾ ಲಸಿಕೆ ಬಗ್ಗೆ ಅರಿವು ಮೂಡಿಸ ಬೇಕೆಂದು ಸೂಚಿಸಿದರು. ಡಾ.ಕೆ.ಶಿವರಾಜ್ ಪ್ರಾಸ್ತಾ ವಿಕ ನುಡಿಗಳನ್ನಾಡಿ, ಮಕ್ಕಳಲ್ಲಿ ಅತಿಸಾರ ಬೇಧಿ ತಡೆಗಟ್ಟಲು ರೋಟಾ ಲಸಿಕೆ ಅಗತ್ಯವಾಗಿದ್ದು, ಬೇರೆ ಯಾವುದೇ ಚಿಕಿತ್ಸೆಯಿಂದ ತಡೆಗಟ್ಟಲು ಸಾಧ್ಯವಿಲ್ಲ. ಅಲ್ಲದೆ ರೋಟಾ ವೈರಸ್ ಸೋಂಕು ನಿವಾರಣೆಗೆ ರೋಟಾ ಲಸಿಕೆ ಒಂದೇ ಮಾರ್ಗ ಎಂದು ತಿಳಿಸಿ ದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವೀರಭದ್ರಯ್ಯ, ಮಹಾನಗರ ಪಾಲಿಕೆ ವೈದ್ಯಾಧಿಕಾರಿ ಡಾ. ನಾಗೇಶ್, ಡಾ. ಪುರುಷೋತ್ತಮ್, ಡಾ. ವಸಂತ್, ಡಾ. ಮೋಹನ್ ಹಾಗೂ ಆಶಾ ಕಾರ್ಯಕರ್ತೆ ಯರು, ನರ್ಸಿಂಗ್ ವಿದ್ಯಾರ್ಥಿನಿಯರು, ನವಜಾತ ಶಿಶು ಮತ್ತು ತಾಯಂದಿರು, ಇಲಾಖೆ ಸಿಬ್ಬಂದಿ ಇದ್ದರು.