Advertisement

ರೋಷನ್‌ ಬೇಗ್‌ ರದ್ದು ಟೀಸರ್‌ , ಸಿನಿಮಾ 23 ಕ್ಕೆ; ಆರ್‌.ಅಶೋಕ್‌ ಲೇವಡಿ

09:25 AM May 22, 2019 | Vishnu Das |

ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕರ ರೋಷನ್‌ ಬೇಗ್‌ ಅವರು ಇಂದು ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಸಿನಿಮಾ ಮೇ 23 ಕ್ಕೆ ಬಿಡುಗಡೆ ಆಗಲಿದೆ ಎಂದು ಮಾಜಿ ಡಿಸಿಎಂ ಆರ್‌.ಅಶೋಕ್‌ ಅವರು ಲೇವಡಿ ಮಾಡಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ,‌ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಸಚಿವಬಿಡುಗಡೆ ಮಾಡಿರುವುದು ಟೀಸರ್‌. ಕಾಂಗ್ರೆಸ್‌ ಹಿರೋ ಇಲ್ಲದ ಪಾರ್ಟಿ, ಅಲ್ಲಿ ಬರೀ ವಿಲನ್‌ಗಳೇ ತುಂಬಿದ್ದಾರೆ. ಸಿದ್ದರಾಮಯ್ಯ ಮುಖ್ಯ ಖಳನಾಯಕ, ದಿನೇಶ್‌ ಗುಂಡೂರಾವ್‌ ಸಹ ಖಳ ನಾಯಕ, ಇನ್‌ ಚಾರ್ಜ್‌ ಕೆ.ಸಿ ವೇಣುಗೋಪಾಲ್‌ ಕಾಮೆಡಿಯನ್‌ ಜೋಕರ್‌ ಎಂದು ಬೇಗ್‌ ಹೇಳಿದ್ದಾರೆಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ ಗೊಂದಲದ ಗೂಡಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಇರಲು ಬಿಡಿ , ನೋಡಲು ಇಷ್ಟವಿಲ್ಲದ ಶಾಸಕರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದರು.

ಮೇ 23 ಕಾಂಗ್ರೆಸ್‌ನವರಿಗೆ ಓಡು, ಓಡು, ಓಡು…ಎಂದು ರೆಸಾರ್ಟ್‌ ಕಡೆ ಕಾಂಗ್ರೆಸ್‌ನವರ ನಡೆ ಆಗುತ್ತದೆ ಎಂದರು. ಮಂಡ್ಯ, ತುಮಕೂರು ಫ‌ಲಿತಾಂಶದ ಬಳಿಕ ಸರ್ಕಾರದಲ್ಲಿ ಭೂಕಂಪ ಆಗಲಿದೆ, ಮೈತ್ರಿ ಸರ್ಕಾರವೆಂಬ ಮನೆ ಬೀಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next