Advertisement

ರೋಸ್‌ ವ್ಯಾಲಿ ಕೇಸ್‌ : ಇಡಿ ಯಿಂದ 40 ಕೋಟಿ ಚಿನ್ನ, ವಜ್ರ ವಶ

04:42 PM Dec 28, 2017 | udayavani editorial |

ಕೋಲ್ಕತ : ರೋಸ್‌ ವ್ಯಾಲಿ ಚಿಟ್‌ ಫ‌ಂಡ್‌ ಹಗರಣ ಕೇಸಿಗೆ ಸಂಬಂಧಿಸಿದಂತೆ ತಾನಿಂದು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ  ಸುಮಾರು 40 ಕೋಟಿ ರೂ. ಮೌಲ್ಯದ ವಜ್ರಗಳು, ರೂಬಿಗಳು, ಸೆಫಾಯರ್‌ಗಳು ಮತ್ತು ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿದೆ.

Advertisement

ರೋಸ್‌ ವ್ಯಾಲಿ ಕೇಸ್‌ನಲ್ಲಿ ಶಾಮೀಲಾಗಿರುವ ಆದ್ರಿಜಾ ಗೋಲ್ಡ್‌ ಕಾರ್ಪೊರೇಶನ್‌ ಲಿಮಿಟೆಡ್‌ ಚಿನ್ನಾಭರಣ ಸಂಸ್ಥೆಯ  ವಿವಿಧ ಮಳಿಗೆಗಳ ಮೇಲೆ ನಡೆಸಿದ ದಾಳಿಯಲ್ಲಿ 40 ಕೋಟಿ ರೂ. ಮೌಲ್ಯದ ಬೆಲೆಬಾಳುವ ಚಿನ್ನ ವಜ್ರದ ಒಡವೆಗಳನ್ನು ತಾನು ವಶಪಡಿಸಿಕೊಂಡಿರುವುದಾಗಿ ಇಡಿ ಪ್ರಕಟನೆಯೊಂದರಲ್ಲಿ  ಹೇಳಿತು.

ಆದ್ರಿಜಾ ಗೋಲ್ಡ್‌ ಕಾರ್ಪೊರೇಶನ್‌ ಲಿಮಿಟೆಡ್‌ ಸಂಸ್ಥೆಯ ಅಧ್ಯಕ್ಷ ಗೌತಮ್‌ ಕುಂಡು  ಮತ್ತು ಇತರರ ಮàಲೆ 2014ರಲ್ಲೇ ಜಾರಿ ನಿರ್ದೇಶನಾಲಯ ಹಣ ದುರುಪಯೋಗ ತಡೆ ಕಾಯಿದೆಯಡಿ ಎಫ್ಐಆರ್‌ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಯುತ್ತಿದೆ ಎಂದು ಇಡಿ ಹೇಳಿದೆ. 

ಕುಂಡು ಅವರನ್ನು 2015ರಲ್ಲಿ ಕೋಲ್ಕತದಲ್ಲಿ ಬಂಧಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next