Advertisement

ʼಗಿರಿಗಿಟ್‌ʼ ಗೆ ಕೋರ್ಟ್‌ ತಡೆಯಾಜ್ಞೆ: ನಟ ರೂಪೇಶ್‌ ಶೆಟ್ಟಿ ಹೇಳುವುದೇನು

09:47 AM Sep 13, 2019 | keerthan |

ಮಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ತುಳು ಚಿತ್ರ ಗಿರಿಗಿಟ್‌ ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.  ಚಿತ್ರದಲ್ಲಿ ನ್ಯಾಯಾಂಗ ಮತ್ತು ವಕೀಲರಿಗೆ ಅವಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ವಕೀಲರ ಸಂಘ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಲಯ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.

Advertisement

ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ಎಂ.ಪಿ ಶೆಣೈ ವಾದ ಮಂಡಿಸಿದ್ದು, ಕಿರಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಹರೀಶ್‌ ಅವರು ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ, ನಟ ರೂಪೇಶ್‌ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಕೋರ್ಟ್‌ ತಡೆಯಾಜ್ಞೆ ನೀಡಿರುವುದರಿಂದ ಬೇಸರವಾಗಿದೆ. ನಾವು ಯಾವುದೇ ಅಪರಾಧ ಮಾಡಿಲ್ಲ. ವಕೀಲರೊಬ್ಬರಲ್ಲಿನ ಬೇಜವಾಬ್ದಾರಿತನವನ್ನು ಪಾತ್ರ ಮೂಲಕ ವಿಡಂಬನೆಯಾಗಿ ತಿಳಿಸುವ ಪ್ರಯತ್ನ ಮಾಡಿದ್ದೇವಷ್ಟೇ. ನಮಗೆ ಸೆನ್ಸಾರ್‌ ಮಂಡಳಿ ಕೂಡಾ ಯು ಸರ್ಟಿಫಿಕೇಟ್‌ ನೀಡಿದೆ. ಆದರೂ ಈ ತಡೆಯಾಜ್ಞೆ ಯಾಕೆಂದು ಅರ್ಥವಾಗುತ್ತಿಲ್ಲ ಎಂದು ತಮ್ಮ ಕಳವಳ ತೋಡಿಕೊಂಡಿದ್ದಾರೆ.

ಕಾನೂನು ಹೋರಾಟ ಅಥವಾ ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ರೂಪೇಶ್‌ ಶೆಟ್ಟಿ ʼಉದಯವಾಣಿʼಯೊಂದಿಗೆ ಮಾತನಾಡುತ್ತಾ ಹೇಳಿದರು.

ತಡೆಯಾಜ್ಞೆ ಹಿಂಪಡೆಯುವಂತೆ ಮನವಿ

Advertisement

ಗಿರಿಗಿಟ್‌ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವುದು ಕೋಸ್ಟಲ್‌ ವುಡ್‌ ಗೆ ಆಘಾತಕಾರಿ ವಿಚಾರ.  ಒಂದು ದೃಶ್ಯದಲ್ಲಿ ವಕೀಲರಿಗೆ ನಿಂದನೆಯಾಗಿದೆ ಎಂದು ಸಂಪೂರ್ಣ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿದೆ. ತಡೆಯಾಜ್ಞೆ ಹಿಂಪಡೆಯುವಂತೆ ಮನವಿ ಸಲ್ಲಿಸಲು ತುಳು ಚಿತ್ರ ರಂಗದ ಎಲ್ಲಾ ಕಲಾವಿದರು ಇಂದು ಮಧ್ಯಾಹ್ನ ಮೂರು ಗಂಟೆಗೆ ನ್ಯಾಯಾಲಯ ಸಂಕೀರ್ಣದಲ್ಲಿ ಸೇರಬೇಕೆಂದು ತುಳು ಕಲಾವಿದರ ಒಕ್ಕೂಟ ಮನವಿ ಮಾಡಿದೆ.

ರೂಪೇಶ್‌ ಶೆಟ್ಟಿಯವರು ನಾಯಕನಾಗಿ ಗಿರಿಗಿಟ್‌ ಚಿತ್ರದಲ್ಲಿ ನಟಿಸಿದ್ದು, ಶಿಲ್ಪ ಶೆಟ್ಟಿಯವರು ನಾಯಕಿಯಾಗಿದ್ದಾರೆ. ಅರವಿಂದ್ ಬೋಳಾರ್‌ ಅವರು ಈ ಚಿತ್ರದಲ್ಲಿ ವಕೀಲನ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಭೋಜರಾಜ ವಾಮಂಜೂರು, ನವೀನ್‌ ಪಡೀಲ್‌ , ಪ್ರಸನ್ನ ಶೆಟ್ಟಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next