Advertisement

ಟೀ-ಜಂಕ್ಷನ್‌ನಲ್ಲಿ ಪತ್ತೇದಾರಿ ರೂಪಿಕಾ!

03:18 PM Aug 31, 2020 | Suhan S |

ಕನ್ನಡದಲ್ಲಿ ಇಲ್ಲಿಯವರೆಗೆ ಲವ್ಲಿ ಗರ್ಲ್ ಆಗಿ, ಟ್ರೇಡಿಷನಲ್‌ ಪಾತ್ರಗಳಲ್ಲಿ ಮಿಂಚಿ ಗಮನ ಸೆಳೆದಿದ್ದ ನಟಿ ರೂಪಿಕಾ ಈಗ ಗಂಭೀರ ಪಾತ್ರಗಳತ್ತ ಚಿತ್ತ ಹರಿಸಿದ್ದಾರೆ.

Advertisement

ಹೌದು, ಸದ್ಯ ರೂಪಿಕಾ “ಟೀ-ಜಂಕ್ಷನ್‌’ ಎನ್ನುವ ಹೊಸಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ವಿಶೇಷ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ತಮ್ಮ ಬದಲಾದ ಗೆಟಪ್‌ ಬಗ್ಗೆ ಮಾತನಾಡುವ ರೂಪಿಕಾ, “ನಾನು ಸಿನಿಮಾರಂಗಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ಹೋಮ್ಲಿ ಮತ್ತು ಟ್ರೆಡೀಷನಲ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಹಾಗಾಗಿ ಆಡಿಯನ್ಸ್‌ ಕೂಡ ಹೆಚ್ಚಾಗಿ ನನ್ನನ್ನು ಅಂಥದ್ದೇ ಪಾತ್ರಗಳಲ್ಲಿ ಗುರುತಿಸುತ್ತಿದ್ದರು. ಆದ್ರೆ, ಇದೇ ಮೊದಲ ಬಾರಿಗೆ “ಟೀ-ಜಂಕ್ಷನ್‌’ನಲ್ಲಿ ಹೊಸಥರದ ಕ್ಯಾರೆಕ್ಟರ್‌ ಪ್ಲೇ ಮಾಡ್ತಿದ್ದೇನೆ. ಇದರಲ್ಲಿ ನನ್ನದು ಸ್ಪೆಷಲ್‌ ಇನ್ವೆಸ್ಟಿಗೇಷನ್‌ ಆಫೀಸರ್‌ ಪಾತ್ರ. ತುಂಬ ಸೀರಿಯಸ್‌ ಆಗಿರುವ ಮತ್ತು ಅಷ್ಟೇ ರಗಡ್‌ ಆಗಿರುವಂಥ ಕ್ಯಾರೆಕ್ಟರ್‌ ಇದು. ನನಗೂ ಇದೊಂಥರಾ ಹೊಸ ಅನುಭವ ಕೊಟ್ಟಿದೆ. ಈ ಥರದ ಶೇಡ್‌ ಇರುವ ಪಾತ್ರ ನಾನು ಯಾವತ್ತೂ ಮಾಡಿರಲಿಲ್ಲ’ ಎನ್ನುತ್ತಾರೆ ರೂಪಿಕಾ. ಇನ್ನು “ಟೀ-ಜಂಕ್ಷನ್‌’ ಚಿತ್ರದಲ್ಲಿ ರೂಪಿಕಾ ಅವರೊಂದಿಗೆ ಅಜಯ್‌ ರಾಜ್‌, ನಾಸೀರ್‌, ರೇಣುಕ್‌ ಮುಖ್ಯ ಪಾತ್ರಗ ಳಲ್ಲಿ ಅಭಿನಯಿಸುತ್ತಿದ್ದಾರೆ.

“ಇದೊಂದು ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ ಎಲಿಮೆಂಟ್‌ ಇರುವ ಸಿನಿಮಾ. ಇಡೀ ಸಿನಿಮಾದ ಬಹುಭಾಗದ ಕಥೆ ಮೂರು ಪಾತ್ರಗಳ ಸುತ್ತ ನಡೆಯುತ್ತದೆ. ಪ್ರತಿ ಸನ್ನಿವೇಶಗಳು ಕುತೂಹಲ ಮೂಡಿ ಸುತ್ತ ಹೋಗುತ್ತದೆ’ ಎನ್ನುವ ರೂಪಿಕಾ, “ಇದರಲ್ಲಿ ಒಳ್ಳೆಯ ಆ್ಯಕ್ಷನ್‌ ಇದೆ. ಮ್ಯಾನ್ಲಿ ಲುಕ್‌ ಇದೆ. ಹೊಸಥರದ ಸಿನಿಮಾಗಳನ್ನು ಇಷ್ಟಪಡುವ ಆಡಿಯನ್ಸ್‌ಗೆ “ಟೀ-ಜಂಕ್ಷನ್‌’ ಖಂಡಿತ ಇಷ್ಟವಾಗಲಿದೆ’ ಎಂಬ ವಿಶ್ವಾಸ ಮಾತುಗಳನ್ನಾಡುತ್ತಾರೆ. ಈ ಹಿಂದೆ “ಆರ್ಯಪುತ್ರ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ರೋಶನ್‌ ಬಾಬು “ಟೀ-ಜಂಕ್ಷನ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಗೌರಿ-ಗಣೇಶ ಕ್ರಿಯೇಶನ್ಸ್‌’ ಬ್ಯಾನರ್‌ನಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದೆ.

ಚಿತ್ರಕ್ಕೆ ರೋಶ್‌ ಛಾಯಾಗ್ರಹಣ, ಜೀವನ್‌ ಪ್ರಕಾಶ್‌ ಸಂಕಲನವಿದೆ. ಕೋವಿಡ್ ಲಾಕ್‌ಡೌನ್‌ಗೂ ಮುಂಚೆಯೇ ಶುರುವಾದ ಈ ಚಿತ್ರದ ಬಹುತೇಕ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಸಲಾಗಿದ್ದು, ಕೊನೆಯ ಹಂತದ ಶೂಟಿಂಗ್‌ ಮಾತ್ರ ಬಾಕಿಯಿದೆ.

…………………………………………………………………………………………………………………………………………….

Advertisement

ಹಾಡಿನ ಮೂಲಕ ಕ್ರಷ್‌ ಪ್ರಚಾರ : ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಕ್ರಷ್‌’ ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಹೆಸರೇ ಹೇಳುವಂತೆ ಔಟ್‌ ಆ್ಯಂಡ್‌ ಔಟ್‌ ರೊಮ್ಯಾಂಟಿಕ್‌ ಲವ್‌ ಕಥಾಹಂದರ ಹೊಂದಿರುವ “ಕ್ರಷ್‌’ ಚಿತ್ರದಲ್ಲಿ ನವ ನಟ ಆರ್ಯವರ್ಧನ್‌, ಪ್ರತಿಭಾ ಸೊಪ್ಪಿಮಠ್, ಮಂಜುನಾಥ ಹೆಗ್ಗಡೆ, ಅಭಿನಯ, ಶ್ರೀಧರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಸೆ¾ çಲಿ ಕ್ರಿಯೇಶನ್ಸ್‌’ ಬ್ಯಾನರ್‌ನಲ್ಲಿ ಎಸ್‌. ಚಂದ್ರ ಮೋಹನ್‌ ನಿರ್ಮಾಣದ “ಕ್ರಷ್‌’ ಚಿತ್ರಕ್ಕೆ ಅಭಿ. ಎನ್‌ ನೃತ್ಯ ಸಂಯೋಜನೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸಿ.ಎಸ್‌ ಸತೀಶ್‌ ಛಾಯಾಗ್ರಹಣ, ಬಿ.ಕೆ ಪವನ್‌ ಸಂಕಲನವಿದೆ. ಸದ್ಯ “ಕ್ರಷ್‌’ ಚಿತ್ರ ಸೆನ್ಸಾರ್‌ ಮುಂದಿದ್ದು, ಇತ್ತೀಚೆಗೆ ನಿಧಾನವಾಗಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ವಿಡಿಯೋ ಸಾಂಗ್‌ ಅನ್ನು ಬಿಡುಗಡೆ ಮಾಡಿದೆ. ಗಾಯಕಿ ಅನುರಾಧ ಭಟ್‌ ಧ್ವನಿಯಾಗಿರುವ ಈ ಹಾಡಿಗೆ ವಿನೀತ್‌ ರಾಜ್‌ ಮೆನನ್‌ ಸಂಗೀತ, ಅನುತ್ತಮ್‌ ಯು.ವಿ ಸಾಹಿತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next