Advertisement

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಭಿವೃದ್ಧಿಗೆ ನಾಂದಿ ಹಾಡಿದ ರೂಪಾಲಿ

12:26 PM Jul 03, 2022 | Team Udayavani |

ಸಂಕಟದಲ್ಲಿ ಸಿಲುಕಿದವರಿಗೆ ಆಪದ್ಬಾಂಧವರು, ಸಂತ್ರಸ್ತರು-ಹಸಿದವರಿಗೆ ಅನ್ನಪೂರ್ಣೆ, ದೀನ-ದಲಿತರಿಗೆ ಅಭಯ ನೀಡುವ ತಾಯಿ, ಬಡವರು-ನೊಂದವರಿಗೆ ಮಹಾಮಾತೆಯಾಗಿದ್ದಾರೆ ಕಾರವಾರ-ಅಂಕೋಲಾ ವಿಧಾನಸಭೆ ಕ್ಷೇತ್ರದ ಸದಸ್ಯೆ ರೂಪಾಲಿ ನಾಯ್ಕ.

Advertisement

ಕಾರವಾರ ಕ್ಷೇತ್ರದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕೊಟ್ಟ ನಾಯಕಿ ರೂಪಾಲಿ ನಾಯ್ಕ. ಸಮಾಜ ಅಭಿವೃದ್ಧಿ ಹಾಗೂ ಪಕ್ಷದ ಬೆಳವಣಿಗೆಗೆ ದಣಿವರಿಯದೆ ದುಡಿಯುತ್ತಿದ್ದಾರೆ.

ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡಿರುವ ರೂಪಾಲಿ ನಾಯ್ಕ ಪಕ್ಷ ನೀಡುವ ಯಾವುದೆ ಜವಾಬ್ದಾರಿ ಇರಲಿ ಅಚ್ಚುಕಟ್ಟುತನದಿಂದ ನಿರ್ವಹಿಸುತ್ತಾರೆ. ಶಾಸಕರಾಗಿ ಆಯ್ಕೆಯಾದ ನಾಲ್ಕು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ದುಡಿದಿದ್ದಾರೆ. ಸುಮಾರು 800 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ತಂದಿದ್ದಾರೆ. ರಸ್ತೆ, ಸೇತುವೆ, ಕಟ್ಟಡ ಹೀಗೆ ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ.

ಕೋವಿಡ್‌-19 ಕಾಯಿಲೆ ದಾಳಿ ಇಟ್ಟು ಲಾಕ್‌ಡೌನ್‌ ಆದಾಗ ಶಾಸಕಿ ರೂಪಾಲಿ ನಾಯ್ಕ ಜನತೆಯ ಸಂಕಷ್ಟಕ್ಕೆ ಓಗೊಟ್ಟರು. ಸ್ವಂತ ಖರ್ಚಿನಲ್ಲಿ 30 ಸಾವಿರಕ್ಕೂ ಹೆಚ್ಚು ಕುಟುಂಬಕ್ಕೆ ಆಹಾರ ಸಾಮಗ್ರಿ ಕಿಟ್‌ಗಳನ್ನು ವಿತರಿಸಿದರು. ಹಳ್ಳಿ ಹಳ್ಳಿಗೆ ಹೋಗಿ ಜನರ ಅಹವಾಲಿಗೆ ಸ್ಪಂದಿಸಿದರು,ನೆರವು ನೀಡಿದರು. ಜನತೆಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿದ ಅವರು, ಲಾಕ್‌ಡೌನ್‌ ನಿಯಮ ಪಾಲಿಸುವಂತೆ, ಮನೆಯಿಂದ ಹೊರಗೆ ಬರದಂತೆ ಜನರ ಮನವೊಲಿಸಿದರು. ಸರ್ಕಾರದಿಂದ ದೊರೆಯಬೇಕಾದ ನೆರವು ಕೊಡಿಸಿದರು.

ಇನ್ನೊಂದೆಡೆ ಪ್ರವಾಹದಿಂದ ಕೆಟ್ಟು ಹೋದ ರಸ್ತೆಗಳ ನವೀಕರಣ, ನೀರು ಪಾಲಾದ ಸೇತುವೆಗಳ ಪುನರ್‌ ನಿರ್ಮಾಣ, ಕಟ್ಟಡಗಳ ನಿರ್ಮಾಣ ಹೀಗೆ ನೂರಾರು ಕೋಟಿ ರೂ.ಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು.

Advertisement

ಶಾಸಕರಾಗಿ ಆಯ್ಕೆಗೊಂಡ ಕೆಲವೇ ಸಮಯದಲ್ಲಿ ಹಿಂದೆ ಕಂಡರಿಯದ ಪ್ರವಾಹ ಬಂತು. ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಕಾಳಿ, ಗಂಗಾವಳಿ ನದಿಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನತೆ ನಿರಾಶ್ರಿತರಾದರು. ಮನೆಗಳು ಉರುಳಿದವು. ಆದರೆ ಶಾಸಕಿ ರೂಪಾಲಿ ನಾಯ್ಕ ಹಗಲು ರಾತ್ರಿಯೆನ್ನದೆ ಪ್ರವಾಹ ಪೀಡಿತರ ನೆರವಿಗೆ ಧಾವಿಸಿದರು. 20 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕಿಟ್‌ ವಿತರಿಸುವ ಮೂಲಕ ಅವರ ಬದುಕಲ್ಲಿ ಭರವಸೆ ತುಂಬಿದರು.

ಅರಬ್ಬಿ ಸಮುದ್ರದಲ್ಲಿನ ಕೂರ್ಮಗಡ ದ್ವೀಪದ ನರಸಿಂಹ ದೇವರ ಜಾತ್ರೆಯಂದು ನಡೆದ ದುರಂತದಲ್ಲಿ ನೀರು ಪಾಲಾಗುತ್ತಿದ್ದವರನ್ನು ಶಾಸಕರು ಸ್ವತಃ ರಕ್ಷಿಸಿದರು. ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಹೀಗೆ ಯಾವುದೆ ಸಮಸ್ಯೆ ಇರಲಿ, ಅವಘಡ ಇರಲಿ ಶಾಸಕಿ ರೂಪಾಲಿ ನಾಯ್ಕ ಧೈರ್ಯದಿಂದ ಎದುರಿಸುತ್ತಾರೆ. ಕಾರವಾರ-ಅಂಕೋಲಾ ತಾಲೂಕಿನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next