Advertisement

ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ: ಶಾಸಕಿ ರೂಪಾಲಿ ನಾಯ್ಕ

09:45 PM Mar 28, 2023 | Team Udayavani |

ಕಾರವಾರ: ಭವಿಷ್ಯದಲ್ಲಿ ಕೆಎಚ್‌ಬಿ ಕಾಲೋನಿಯನ್ನು ಮಿನಿ ಸಿಟಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

Advertisement

ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ನಗರೋತ್ಥಾನ 3 ಹಾಗೂ 4 ಹಂತ ಮತ್ತು ಲೋಕೋಪಯೋಗಿ ಇಲಾಖೆ ಕಾಮಗಾರಿಗಳಿಗೆ ಮಂಗಳವಾರ ರಾತ್ರಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೆಎಚ್‌ಬಿ ಕಾಲೋನಿಯ ಎಲ್ಲಾ ರಸ್ತೆಗಳ ನಿರ್ಮಾಣಕ್ಕೆ 1.50 ಕೋಟಿ ಅನುದಾನವನ್ನು ಒದಗಿಸಲಾಗಿದೆ. ಈ ಮೂಲಕ ಎಲ್ಲ ರಸ್ತೆ ಚರಂಡಿಗಳು ನಿರ್ಮಾಣವಾಗಲಿದೆ. ಮಳೆಗಾಲದ ಸಂದರ್ಭದಲ್ಲಿ ಕೆಎಚ್‌ಬಿ ಕಾಲೋನಿಯಲ್ಲಿ ರಸ್ತೆಯ ಮೇಲೆ ನೀರು ನಿಂತಿರುತ್ತಿತ್ತು. ಈಗ ಚರಂಡಿ ನಿರ್ಮಾಣಕ್ಕೆ ಮೊದಲು ಆದ್ಯತೆ ನೀಡಲಾಗುತ್ತಿದ್ದು, ರಸ್ತೆಯೂ ಸಹ ನಿರ್ಮಾಣ ಮಾಡಲಾಗುವುದು ಎಂದರು.

ಕೆಎಚ್‌ಬಿ ಅವರೇ ರಸ್ತೆ ಹಾಗೂ ಚರಂಡಿಯ ನಿರ್ವಹಣೆಯನ್ನು ಮಾಡಬೇಕು. ಅದಕ್ಕೆ ನಾವು ಅನುದಾನವನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಆದರೆ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿ ಕೆಎಚ್‌ಬಿ ರಸ್ತೆ ಚರಂಡಿ ನಿರ್ಮಾಣಕ್ಕೆ ನೇರವಾಗಿ ಅನುದಾನ ಒದಗಿಸುವಂತೆ ವಿನಂತಿಸಿಕೊಂಡಾಗ ಅನುದಾನವನ್ನು ನೀಡಿದ್ದಾರೆ ಎಂದು ಹೇಳಿದರು.

ನಮ್ಮ ಜನರು ತುಂಬಾ ಕಷ್ಟ ಅನುಭವಿಸುತ್ತಿದ್ದರು. ಮುಂದಿನ ದಿನದಲ್ಲಿ ಅವೆಲ್ಲವೂ ನಿವಾರಣೆಯಾಗಲಿದೆ. ನಿಮ್ಮೊಂದಿನೆ ನಾನು ಸದಾ ಇರುತ್ತೇನೆ.ನಗರದ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಇಲ್ಲದೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರು. ಮಳೆಗಾಲದಲ್ಲಿ ಚರಂಡಿ ಇಲ್ಲದೆ ರಸ್ತೆಯ ಮೇಲೆ ನೀರು ಹರಿದು ಹೋಗುತ್ತಿತ್ತು. ಅದಕ್ಕಾಗಿ ಅವೆಲ್ಲ ಸಮಸ್ಯೆಗಳನ್ನು ಕಂಡು ಎಲ್ಲ ವಾರ್ಡ್‌ಗಳಿಗೆ ರಸ್ತೆ ನಿರ್ಮಾಣಕ್ಕೆ ಅನುದಾನವನ್ನು ಹಂಚಿಕೆ ಮಾಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹದಗೆಟ್ಟ ರಸ್ತೆಗಳ ಸುಧಾರಣೆಗೂ ಅನುದಾನ ಒದಗಿಸಲಾಗಿದೆ.

Advertisement

ಮುಂದಿನ ದಿನದಲ್ಲಿ ರಸ್ತೆಗಳು ನಿರ್ಮಾಣವಾಗಲಿವೆ. ಚರಂಡಿಗಳು ನಿರ್ಮಾಣವಾಗಲಿವೆ. ಕಾರವಾರ ನಗರ ಮುಂದಿನ ದಿನದಲ್ಲಿ ಇನ್ನೂ ಬೃಹತ್ತಾಗಿ ಬೆಳೆಯಲಿದೆ. ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಈ ಸಂದರ್ಭದಲ್ಲಿ, ಕಾರವಾರ ನಗರಸಭೆ ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಸಾರ್ವಜನಿಕರು, ಮುಖಂಡರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: 55 ಯೋಜನೆಗಳ 3451.24 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗೆ ಅನುಮೋದನೆ

Advertisement

Udayavani is now on Telegram. Click here to join our channel and stay updated with the latest news.

Next