Advertisement

ಐಪಿಎಸ್ ಅಧಿಕಾರಿ ರೂಪಾ ಸಣ್ಣ ಮಟ್ಟಕ್ಕೆ ಇಳಿದಿದ್ದಾರೆ: ಬೇಳೂರು ರಾಘವೇಂದ್ರ ಶೆಟ್ಟಿ

02:18 PM Jun 02, 2022 | Team Udayavani |

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಗುರುವಾರ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮಾ ಅವರನ್ನು ಭೇಟಿಯಾಗಿದ್ದಾರೆ.

Advertisement

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ವಿರುದ್ಧ ನಿಗಮದ ಎಂಡಿ ರೂಪಾ ಮೌದ್ಗಿಲ್ ಅವರು ಮಾಡಿರುವ ”ಕಳಂಕಿತ ಅಧಿಕಾರಿಯ‌ ಮರು ನೇಮಕಕ್ಕೆ 5 ಕೋಟಿ ಡೀಲ್‌” ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು. ಸಿಎಸ್‌ ಭೇಟಿಯಾಗಿದ್ದೇನೆ, ಕೆಲವೊಂದು ದಾಖಲೆ ಕೊಟ್ಟಿದ್ದೇನೆ. ರೂಪಾ ಮೌದ್ಗಿಲ್ ಎರಡು ದಿನಕ್ಕೊಮ್ಮೆ ಆಫೀಸ್ ಗೆ ಬರುತ್ತಾರೆ. ಮನೆಗೆ ಫೈಲ್ ತರಿಸಿಕೊಂಡು ಮನೆಯಲ್ಲೇ‌ ಕೆಲಸ‌ ಮಾಡುತ್ತಾರೆ. ನಿಗಮದ ಎಂಡಿ ರೂಪಾ ಮೌದ್ಗಿಲ್ ನಿಗಮಕ್ಕೆ ಹೊರೆ ತಂದಿದ್ದಾರೆ. ಸರಕಾರಿ ವಾಹನಗಳ ಲ್ಲಿ ಒಂದು‌ ಮನೆಯ ಬಳಕೆಗೆ, ಮತ್ತೊಂದು ಅವರ ವೈಯಕ್ತಿಕ ಬಳಕೆಗೆ ಬಳಕೆ ಮಾಡುತ್ತಾರೆ.ನಿಗಮದ ಅಧ್ಯಕ್ಷನಾದ ನನಗೇ‌ ಕಚೇರಿಯ ದಾಖಲೆಗಳನ್ನ ಕೊಡುವುದಿಲ್ಲ. ಈ ಬಗ್ಗೆ ‌ನಾನು ಮಾಧ್ಯಮಗಳ ಮುಂದೆ ಹೋಗುತ್ತೇನೆ ಅನ್ನುವ ಭಯ‌ ಅವರಿಗಿದೆ. ಹೀಗಾಗಿ ನನ್ನ ವಿರುದ್ಧ ಅವರೇ ಮೊದಲು ಮಾಧ್ಯಮಗಳ ಮುಂದೆ ಹೋಗಿದ್ದಾರೆ ಎಂದರು.

ನನ್ನ ಕಚೇರಿಯಲ್ಲಿ ಸಿಸಿಟಿವಿ ಕನೆಕ್ಷನ್ ಕಟ್ ಮಾಡಿದ್ದಾರೆ. ಐಪಿಎಸ್ ಅಧಿಕಾರಿ ಆಗಿ‌ ಸಣ್ಣ ಮಟ್ಟಕ್ಕೆ ಇಳಿದಿದ್ದಾರೆ. ನಾನು ರೂಪಾ‌ ಅವರಿಗೆ‌ ಸವಾಲು ಹಾಕುತ್ತೇನೆ. ಆರೋಪ ಕೇಳಿಬಂದಿರುವ ಕಿಶೋರ್ ನನ್ನ‌ ಸಂಪರ್ಕದಲ್ಲಿ ಇಲ್ಲ. ರೂಪಾ‌ ಮೌದ್ಗಿಲ್‌ ವಿರುದ್ಧ ನಾನು 75 ನೋಟಿಸ್ ನೀಡಿದ್ದೇನೆ. ದುರುದ್ದೇಶದಿಂದ ನಿಯಮಕ್ಕೆ 10,70 ಲಕ್ಷ ಹೊರೆ ಮಾಡಿದ್ದಾರೆ. ಕಾರು ಅಪಘಾತವಾದ‌ ನಂತರ‌ ಇನ್ ಶ್ಯೂರೆನ್ಸ್ ಕಂಪನಿಗೆ ಮಾಹಿತಿ ನೀಡಿಲ್ಲ. ಪರಿಣಾಮ‌ ನಿಗಮವೇ ಕಾರಿನ ರಿಪೇರಿಗೆ ಹಣ ಖರ್ಚು ಮಾಡಬೇಕಿದೆ. ಐದು ಕೋಟಿ ಅವ್ಯವಹಾರ‌ ನನ್ನ ಅವಧಿಯಲ್ಲಿ ಆಗಿಲ್ಲ.
ರೂಪಾ ಅವರ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next