Advertisement

ಕಾಸರಗೋಡು ರೈಲು ನಿಲ್ದಾಣದಲ್ಲಿ  ಮೇಲ್ಛಾವಣಿ ನಿರ್ಮಾಣ

01:00 AM Feb 04, 2019 | Harsha Rao |

ಕಾಸರಗೋಡು-ಕಣ್ಣೂರು ಜಿಲ್ಲೆಗಳಲ್ಲಿ 10 ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯದ ಭೂಸ್ವಾಧೀನ ಮೊದಲಾದವುಗಳನ್ನು ರಾಜ್ಯ ಸರಕಾರದ ನೆರವಿನೊಂದಿಗೆ ಪೂರ್ತಿಗೊಳಿಸಲಿದೆ. ಒಟ್ಟು ವೆಚ್ಚದ ಅರ್ಧದಷ್ಟನ್ನು ರಾಜ್ಯ ಸರಕಾರ ವಹಿಸಬೇಕು. 10 ಮೇಲ್ಸೇತುವೆಗಳಿಗೆ ತಲಾ ಒಂದು ಲಕ್ಷ ರೂ.ಯನ್ನು ಈಗಾಗಲೇ ಮಂಜೂರು ಮಾಡಲಾಗಿದೆ.
ಉಪ್ಪಳ-ಕುಂಬಳೆಯ ಮಧ್ಯೆ ಆರಿಕ್ಕಾಡಿ ಕಡವತ್‌ನಲ್ಲಿ ಕೆಳ ಸೇತುವೆ ನಿರ್ಮಿಸಲು 4.53 ಕೋಟಿ ರೂ. ಮಂಜೂರು ಮಾಡಿದೆ. ಕಾಸರಗೋಡು-ಕಣ್ಣೂರು ರೈಲು ಹಳಿ ನವೀಕರಿಸಲು 20 ಕೋಟಿ ರೂ.ಗೂ ಅಧಿಕ ಮೊತ್ತ ಕಾದಿರಿಸಲಾಗಿದೆ.

Advertisement

ಕಾಸರಗೋಡು: ದಿನಗಳ ಹಿಂದೆ ಸಂಸತ್ತಿನಲ್ಲಿ ಮಂಡಿಸಿದ ಮುಂಗಡಪತ್ರದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ರೈಲ್ವೇ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಘೋಷಿಸಿದೆ. ಕಾಸರಗೋಡು-ಕಣ್ಣೂರು ಮಧ್ಯೆ 10 ರೈಲ್ವೇ ಮೇಲ್ಸೇತು ವೆಗಳನ್ನು ಹಾಗೂ ಉಪ್ಪಳ-ಕುಂಬಳೆಯ ಮಧ್ಯೆ ಆರಿಕ್ಕಾಡಿ ಕಡವತ್‌ನಲ್ಲಿ ಕೆಳ ಸೇತುವೆ ನಿರ್ಮಾಣ ಯೋಜನೆ ಸಾಕಾರಗೊಳ್ಳಲಿದೆ. ಕಾಸರಗೋಡು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ನಲ್ಲಿ ಮೇಲ್ಛಾ ವಣಿ ನಿರ್ಮಾಣಗೊಳ್ಳಲಿದೆ. ರೈಲ್ವೇ ಅಭಿವೃ ದ್ಧಿಯ ಹಿನ್ನೆಲೆಯಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಪ್ರಕಟಿಸಿದೆ.

ಕುಂಬಳೆ-ಮಂಜೇಶ್ವರ ಮಧ್ಯೆ ಮತ್ತು ಮಾಹೆ-ವಡಕರದ ಮಧ್ಯೆ ಈ ಮೊದಲು ಮಂಜೂರು ಮಾಡಿದ್ದ ಇಂಟರ್‌ ಮೀಡಿಯಟ್‌ ಬ್ಲಾಕ್‌ ಸೆಕ್ಷನ್‌ಗಳಿಗೆ ತಲಾ ಒಂದೂವರೆ ಕೋಟಿ ರೂ. ಈ ಬಾರಿ ಕಾದಿರಿಸಿದೆ. ಕಾಸರಗೋಡು ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗಳಲ್ಲಿ ಮೇಲ್ಛಾವಣಿ ನಿರ್ಮಿಸಲು ನಿಧಿ ಕಾದಿರಿಸಲಾಗಿದೆ.

ಮಂಗಳೂರು-ಕಲ್ಲಿಕೋಟೆ ಮಧ್ಯೆ ಇಂಟರ್‌ ಮೀಡಿಯಟ್‌ ಬ್ಲಾಕ್‌ ಸೆಕ್ಷನ್‌ಗಳನ್ನು ಮಂಜೂರು ಮಾಡಿದೆ. ಇದರಿಂದಾಗಿ ರೈಲು ಗಾಡಿಗಳು ರೈಲು ನಿಲ್ದಾಣದಲ್ಲಿ ಹೆಚ್ಚು ಹೊತ್ತು ನಿಲ್ಲಿಸದೆ ರೈಲ್ವೇ ಸರ್ವೀಸ್‌ ಸುಗಮವಾಗಿ ನಡೆಸಲು ಸಾಧ್ಯವಾಗುವುದು. ತಿಕೋಡಿ-ವಡಕರ ನಿಲ್ದಾಣಗಳ ಮಧ್ಯೆ ನೂತನ ಇಂಟರ್‌ಮೀಡಿಯಟ್‌ ಬ್ಲಾಕ್‌ ಸೆಕ್ಷನ್‌ ಆರಂಭಿಸಲಾಗುವುದು. ಈ ನಿಲ್ದಾಣಗಳ ಮಧ್ಯೆ ಸಿಗ್ನಲ್‌ಗ‌ಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಪ್ರಥಮ ಹಂತ ಎಂಬಂತೆ ಒಂದೂವರೆ ಕೋಟಿ ರೂ. ಮಂಜೂರು ಮಾಡಲಾಗಿದೆ.

ಕಣ್ಣೂರು ರೈಲು ನಿಲ್ದಾಣದಲ್ಲಿ ನಾಲ್ಕನೇ ಪ್ಲಾಟ್‌ಫಾಮ್‌ ನಿರ್ಮಿಸಲು 2 ಕೋಟಿ ರೂ. ಮಂಜೂರು ಮಾಡಿದೆ. 6.46 ಕೋಟಿ ರೂ. ವೆಚ್ಚ ನಿರೀಕ್ಷಿಸುವ ಈ ಯೋಜನೆಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ.

Advertisement

ಮಾಹೆ-ತಲಶೆÏàರಿ ಮಧ್ಯೆ ಮಾಕೂಟ್ಟಂ, ತಲಶೆÏàರಿ ಮತ್ತು ಎಡಕಾಡ್‌ ಮಧ್ಯೆ ಮುಪ್ಪಿಲಂಗಾಡ್‌ ಕುಳಂ, ಎಡಕಾಡ್‌-ಕಣ್ಣೂರಿನ ಮಧ್ಯೆ ಕಣ್ಣೂರು ಸೌತ್‌ ರೈಲು ನಿಲ್ದಾಣ ಸಮೀಪ ಸ್ಪಿನ್ನಿಂಗ್‌ ಮಿಲ್‌, ಕಣ್ಣೂರು-ವಳಪಟ್ಟಣಂ ಮಧ್ಯೆ ಪನ್ನೆನ್‌ಪಾರ, ಪಾಪ್ಪಿನಶೆÏàರಿ-ಕಣ್ಣಪುರದ ಮಧ್ಯೆ ಚೈನಾಕ್ಲೇ, ಕಣ್ಣಪುರ-ಪಳಯಂಗಾಡಿ ಮಧ್ಯೆ ಕಾನ್ವೆಂಟ್‌, ಎಳಿಮಲ ನಿಲ್ದಾಣ ಸಮೀಪದ ಕುಂಞಿಮಂಗಲ, ಪಯ್ಯನ್ನೂರು ಮತ್ತು ತೃಕ್ಕರಿಪುರ ಮಧ್ಯೆ ಒಳವರ, ರಾಮವೀಲ್ಯ, ಉಪ್ಪಳ ಮತ್ತು ಮಂಜೇಶ್ವರ ನಿಲ್ದಾಣದ ಮಧ್ಯೆ ಉಪ್ಪಳದಲ್ಲಿ ಲೆವೆಲ್‌ ಕ್ರಾಸ್‌ಗಳಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದು. ಇದಕ್ಕಾಗಿ ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next