Advertisement

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

06:56 PM Sep 12, 2024 | Team Udayavani |

ಕನ್ನಡ ಚಿತ್ರರಂಗಕ್ಕೆ ಬರುವ ಯಾವುದೇ ನಟ, ನಟಿಯಾಗಲಿ ಆರಂಭಿಕ ದಿನಗಳಲ್ಲಿ ಸೈಕಲ್‌ ಹೊಡೆಯುತ್ತಲೇ ಇದ್ದಾರೆ. ಮೊದಲು ಚಿತ್ರದಲ್ಲಿ ಅವಕಾಶ, ನಂತರ ಒಳ್ಳೆಯ ಪಾತ್ರ, ಬಳಿಕ ಮುಖ್ಯ ಪಾತ್ರ ಹೀಗೆ ಬಯಸುತ್ತಲೇ ಇದ್ದಾರೆ. ಸದ್ಯ ನಟಿ ಸಮೀಕ್ಷಾ ಅವರದ್ದೂ ಇದೇ ಹಾದಿ. ಅವರ ನಟನೆಯ ರಾನಿ ಚಿತ್ರ ಇಂದು ತೆರೆಕಾಣುತ್ತಿದೆ.

Advertisement

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲೇ ಗುರುತಿಸಿಕೊಂಡ ಈ ನಟಿ, ಒಂದು ಯಶಸ್ಸಿಗೆ ಹಾತೊರೆಯುತ್ತಿದ್ದಾರೆ. ರಾನಿ ಬಿಡುಗಡೆ ಹಿನ್ನೆಲೆ ಮಾತನಾಡಿದ ಅವರು, “ಚಿತ್ರದಲ್ಲಿ ನಾನು ಚಿತ್ರ ಕಲಾವಿದೆ ಪಾತ್ರ ಮಾಡಿದ್ದೇನೆ. ಅತ್ಯಂತ ಮುಗ್ಧ, ದೇವರು, ಕರ್ಮ ಇವೆಲ್ಲವನ್ನು ನಂಬುವಂಥ ಪಾತ್ರ ನನ್ನದು. ಎಂಥ ಪರಿಸ್ಥಿತಿಯಲ್ಲೂ ತನ್ನ ದಾರಿ ಬಿಡದೆ ಸಾಗುವ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಮೂಲಕ ಇನ್ನಷ್ಟು ಗುರುತಿಸಿಕೊಳ್ಳುವ ಹಂಬಲವಿದೆ’ ಎನ್ನುತ್ತಾರೆ ನಟಿ ಸಮೀಕ್ಷಾ.

ಗುರುತೇಜ್‌ ಶೆಟ್ಟಿ ನಿರ್ದೇಶನದ ಚಿತ್ರವನ್ನು ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗಡೆ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next