Advertisement

ರೋಮನ್ನರ ಹೊಳೆಯುವ ಹಲ್ಲುಗಳ ಹಿಂದಿನ ಗುಟ್ಟು!

08:38 PM Aug 07, 2019 | Team Udayavani |

ಜಗತ್ತಿನ ನಾಗರಿಕತೆಗಳಲ್ಲಿ ರೋಮ್‌ಗೆ ವಿಶೇಷ ಸ್ಥಾನವಿದೆ. ಇಂಗದಿನ ದಿನಗಳಲ್ಲಿ ನಾವೆಲ್ಲರೂ ಬಳಸುತ್ತಿರುವ ಅನೇಕ ಸಾರ್ವಜನಿಕ ಸವಲತ್ತುಗಳನ್ನು ರೋಮನ್ನರು ಶನಶತಮಾನಗಳ ಹಿಂದೆಯೇ ಆವಿಷ್ಕರಿಸಿ ಕಾರ್ಯರೂಪಕ್ಕೆ ತಂದಿದ್ದರು. ರಸ್ತೆ, ಒಳಚರಂಡಿ ವ್ಯವಸ್ಥೆ, ಅಂಚೆ ವ್ಯವಸ್ಥೆ, ಸಾರ್ವಜನಿಕ ಗ್ರಂಥಾಲಯ ಮುಂತಾದವು ಆಗಿನ ಕಾಲದಲ್ಲೇ ರೋಮ್‌ನಲ್ಲಿ ಚಾಲ್ತಿಯಲ್ಲಿದ್ದವು. ಆದರೆ ಬಹಳ ಜನರಿಗೆ ಗೊತ್ತಿಲ್ಲದ ಸಂಗತಿಯೊಂದು ಇಲ್ಲಿದೆ.

Advertisement

ಬೆಳಗೆದ್ದು ಮೊದಲು ನಾವು ಮಾಡುವ ಕೆಲಸ ಹಲ್ಲುಜ್ಜುವುದು. ಇಂದು ಥರಹೇವಾರಿ ಸ್ವಾದಗಳ, ವಿಭಿನ್ನ ಬಗೆಯ ಟೂತ್‌ಪೇಸ್ಟುಗಳು ನಮ್ಮ ನಡುವೆ ಇವೆ. ಆದರೆ ಆಗಿನ ರೋಮ್‌ನಲ್ಲಿ ಟೂತ್‌ಪೇಸ್ಟುಗಳಿರಲಿಲ್ಲ. ಆಗಿನ ಕಾಲದ ರೋಮನ್ನರು ಹಲ್ಲುಜ್ಜಲು ಮೂತ್ರವನ್ನು ಬಳಸುತ್ತಿದ್ದರು. ಮೂತ್ರದಲ್ಲಿ ಅಮೋನಿಯಾ ಎಂಬ ರಾಸಾಯನಿಕವಿದೆ. ಅದಕ್ಕೆ ಶುಚಿಗೊಳಿಸುವ, ಕೊಳೆ ತೆಗೆಯುವ ಗುಣವಿದೆ. ಅದಕ್ಕಾಗಿಯೇ ಮನೆ ಶುಚಿಗೊಳಿಸಲು ಬಳಸುವ ಕ್ಲೀನರ್‌ಗಳಲ್ಲಿ ಅಮೋನಿಯಾವನ್ನು ಹಾಕಿರುತ್ತಾರೆ. ಆಗಿನ ರೋಮ್‌ ಸಾಮ್ರಾಜ್ಯದಲ್ಲಿ ಕೆಮಿಕಲ್‌ ಯಾವುವೂ ಇಲ್ಲದೇ ಇದ್ದುದರಿಂದ ಅಮೋನಿಯಾ ಅಂಶವಿದ್ದ ಮೂತ್ರವನ್ನೇ ಹಲ್ಲು, ಬಟ್ಟೆಗಳನ್ನು ಶುಚಿಗೊಳಿಸಲು ಬಳಸುತ್ತಿದ್ದರು. ಅಷ್ಟೇ ಯಾಕೆ ನಗರಗಳಲ್ಲಿರುತ್ತಿದ್ದ ಬಟ್ಟೆ ಒಗೆಯುವ ಕೇಂದ್ರಗಳಲ್ಲಿ ಮೂತ್ರವನ್ನು ಸಂಗ್ರಹಿಸುವ ತೊಟ್ಟಿಗಳೇ ಇದ್ದವಂತೆ!

ಹವನ

Advertisement

Udayavani is now on Telegram. Click here to join our channel and stay updated with the latest news.

Next