Advertisement

ರೋಲರ್‌ ಕ್ರ್ಯಾಶ್ ರೋಡ್‌ ಡಿವೈಡರ್‌

02:39 PM Aug 05, 2018 | |

ಸಾರಿಗೆ ಮತ್ತು ಸಂಪರ್ಕಗಳ ಮುಂದುವರಿಯುತ್ತಿರುವ ತಂತ್ರಜ್ಞಾನ ಅಥವಾ ಆವಿಷ್ಕಾರಗಳು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ. ಆದರೆ ಅಷ್ಟೇ ಅಪಘಾತಕ್ಕೂ ಕಾರಣವಾಗುತ್ತಿವೆ. ಹೆದ್ದಾರಿ, ಚತುಷ್ಪಥ, ಷಟ್ಪಥ, ಸೂಪರ್‌ ಹೈವೆಗಳ ನಿರ್ಮಾಣ ಜೋರಾಗುತ್ತಿದೆ. ಇದು ಅಭಿವೃದ್ಧಿ ಸಂಕೇತ ಹೌದು. ಆದರೆ ಇಂತಹ ರಸ್ತೆಗಳಲ್ಲಿ ಓಡುವ ವಾಹನಗಳಿಂದ ಅಪಘಾತದ ಪ್ರಮಾಣಗಳೂ ಹೆಚ್ಚಾಗುತ್ತಿವೆ. ಎಷ್ಟೇ ತಡೆಗೋಡೆ ಅಥವಾ ರೋಡ್‌ ಡಿವೈಡರ್‌ಗಳನ್ನು ನಿರ್ಮಿಸಿದರೂ ವಾಹನಗಳು ರಸ್ತೆ ಬಿಟ್ಟು ಹೊಂಡ, ಗುಂಡಿಗಳನ್ನು ಸೇರುತ್ತಿವೆ. ಇದರ ತಡೆಗಾಗಿ ಹೊಸ ಮಾದರಿಯ ರಸ್ತೆ ತಡೆಗೋಡೆಯನ್ನು ಈಗಾಗಲೇ ನಿರ್ಮಿಸಿ ಆದಷ್ಟು ಕಡಿಮೆ ಅಪಘಾತ, ಹಾನಿಯನ್ನು ಕಡಿಮೆ ಮಾಡುವ ಹೊಸ ತಂತ್ರಜ್ಞಾನವನ್ನು ಜಗತ್ತಿನ ವಿವಿಧೆಡೆ ಅಳವಡಿಸಲಾಗಿದೆ.

Advertisement

ರೋಲರ್‌ ಕ್ರ್ಯಾಶ್ ಬ್ಯಾರಿಯರ್‌ ಎನ್ನುವ ರೋಡ್‌ ಡಿವೈಡರ್‌ಗಳು ವಾಹನ ನಿಯಂತ್ರಣ ತಪ್ಪಿ ಗೋಡೆಗೆ ಢಿಕ್ಕಿ ಹೊಡೆದರೂ ಇದು ಎಚ್ಚರಿಸುತ್ತದೆ. ಇದರಿಂದ ಆಕ್ರಮಿತ ಅಪಾಯ ಹಾಗೂ ಮುಂದೆ ಉಂಟಾಗುವ ಹಾನಿಯನ್ನು ಕಡಿಮೆಗೊಳಿಸುತ್ತದೆ. ಈ ತಡೆಗೋಡೆ ಎಲ್ಲ ಹವಾಮಾನದ ಸ್ಥಿತಿಗತಿಗೂ ಸೂಕ್ತವಾಗಿ ರಸ್ತೆಗಳ ಇಕ್ಕೆಲಗಳಲ್ಲೂ ಇದನ್ನು ಅಳವಡಿಸಬಹುದಾಗಿದೆ.

ಘಾಟ್‌ ರಸ್ತೆಗಳು, ನಗರ, ಇಳಿಜಾರು ರಸ್ತೆ, ಶಾಲಾ ವಲಯ, ಅಪಾಯ ವಲಯ ಹೀಗೆ ಎಲ್ಲ ಕಡೆಗಳಲ್ಲಿ ಇದನ್ನು ನಿರ್ಮಿಸಿ ಮುಂದೆ ಉಂಟಾಗಬಹುದಾದ ಅಪಾಯವನ್ನು ತಪ್ಪಿಸಬಹುದು. ಇದು ಅಪಾಯದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಸೇಫ್ಟಿ ರೋಲರ್‌ ಕ್ರ್ಯಾಶ್ ಬ್ಯಾರಿಯರ್‌ ವಾಹನ ಮತ್ತು ಸವಾರರಿಗೆ ಉಂಟಾಗುವ ಅಪಾಯದ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ವಾಹನದ ವೇಗವನ್ನು ತಿರುಗುವ ಶಕ್ತಿಯಾಗಿ ಪರಿವರ್ತಿಸುತ್ತದೆ. ಇದರಿಂದ ವೇಗದ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೇ ಮರು ರಸ್ತೆಯತ್ತ ವಾಹನ ಮುಖ ಮಾಡುವಂತೆ ಮಾಡುತ್ತದೆ.  ಗ್ಲೋಬಲ್‌ ಸೇಫ್ಟಿ ರೋಲರ್‌ ಕ್ರ್ಯಾಶ್ ಬ್ಯಾರಿಯರ್‌ಗಳು ಆಘಾತ ಶಕ್ತಿಯನ್ನು ಹೀರಿಕೊಳ್ಳುವ ಮೂಲಕ ಮಾರಕ ಗಾಯಗಳನ್ನು ತಡೆಗಟ್ಟುವ ಸಲುವಾಗಿ ಅಪಘಾತ ಶಕ್ತಿಯನ್ನು ಪರಿಭ್ರಮಿಸುವ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಇದರ ಪರಿಣಾಮವಾಗಿ ವೇಗವಾಗಿ ತಡೆಗೋಡೆಯತ್ತ ಬರುವ ವಾಹನಗಳು ಅಲ್ಲಿಂದ ತಿರುಗಿ ರಸ್ತೆಯತ್ತ ತೆರಳುತ್ತದೆ. ಇದು ಜೀವ ರಕ್ಷಕವಾಗಿದೆ. 

ಈ ತಡೆಗೋಡೆಯಲ್ಲಿ ಅಳವಡಿಸಿರುವ ರೋಲರ್‌ ಗಳು ಆರಂಭಿಕ ಘರ್ಷಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಪರಿಭ್ರಮಿಸುವ ಶಕ್ತಿ ಉಂಟಾಗುತ್ತದೆ. ಮುಂಭಾಗದ ಹಳಿಗಳು ಎರಡನೇ ಅಪಘಾತವನ್ನು ಹೀರಿಕೊಳ್ಳುತ್ತದೆ. ಈ ಹಳಿಗಳ ಮಧ್ಯೆ ಅಳವಡಿಸಿರುವ ಮೆಟಲ್‌ ಪೈಪ್‌ ಗಳು ಇದಕ್ಕೆ ಬಲವನ್ನು ನೀಡುತ್ತದೆ. ಈಗಾಗಲೇ ಇದನ್ನು ಕೊರಿಯಾ, ಯುಎಸ್‌ಎ ಮೊದಲಾದ ದೇಶಗಳ ರಸ್ತೆ ಬದಿಗಳಲ್ಲಿ ಅಳವಡಿಸಿದ್ದು, ಅಪಘಾತ ಹಾಗೂ ಹಾನಿಯನ್ನು ಕಡಿಮೆಯಾಗುವಂತೆ ಮಾಡಿದೆ. 

ಭರತ್‌ರಾಜ್‌ ಕರ್ತಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next