Advertisement

ಮಕ್ಕಳ ಸ್ಪರ್ಧಾತ್ಮಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಸಿದ್ದು ಸವದಿ

07:50 PM Jan 17, 2022 | Team Udayavani |

ರಬಕವಿ-ಬನಹಟ್ಟಿ : ಮಕ್ಕಳ ಸ್ಪರ್ಧಾತ್ಮಕ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಸರಕಾರಿ ಶಾಲೆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.

Advertisement

ಅವರು ಸೋಮವಾರ ಬನಹಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ತೋಟದ ಶಾಲೆಯಲ್ಲಿ  ಲೆಕ್ಕ ಶೀರ್ಷಿಕೆ. 8443 ನಬಾರ್ಡ್ 25 ರ ಯೋಜನೆ 2019-20ನೇ ಸಾಲಿನಲ್ಲಿ ನೂತನವಾಗಿ ನಿರ್ಮಿಸಲಾದ 2 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಸರಕಾರ ಎಲ್ಲ ರತಿಯ ಅನುಧಾನಗಳನ್ನು ಸರಕಾರಿ ಶಾಲೆಗಳಿಗೆ ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಮೌಲ್ಯಗಳನ್ನು ನೀಡಿ ನಾಳಿನ ಸತ್ಪ್ರಜೆಗಳನ್ನಾಗಿ ರೂಪಿಸಿ, ತೋಟದ ಶಾಲೆಯ ಮಕ್ಕಳಿಗೆ ಆದರ್ಶ ಶಿಕ್ಷಣವನ್ನು ನೀಡಿ ಎಂದರು.

ಇಲ್ಲಿಯ ಎಸ್‌ಡಿಎಂಸಿ ಸದಸ್ಯರು ಉತ್ತಮ ಕಾರ್ಯ ಮಾಡುತ್ತಿದ್ದು, ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ, ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಎಂ. ನೇಮಗೌಡ, ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಬಿಆರ್‌ಪಿ ಆರ್. ಎಂ. ಸಂಪಗಾಂವಿ, ಎಸ್‌ಡಿಎಂಸಿ ಅಧ್ಯಕ್ಷ ಮಲಕಪ್ಪ ಪಾಟೀಲ, ಗಿರಮಲ್ಲಪ್ಪ ಅಥಣಿ, ಭೀಮಸಿ ಹಂದಿಗುಂದ, ಈಶ್ವರ ಪಾಟೀಲ, ಜಯವಂತ ಮಿಳ್ಳಿ, ರಾಮಪ್ಪ ಪಾಟೀಲ ಬಸು ಗುಂಡಿ, ಶ್ರೀಶೈಲ ಉಳ್ಳಾಗಡ್ಡಿ, ಮಲ್ಲಪ್ಪ ಹಂದಿಗುಂದ, ಎಸ್. ಬಿ. ಗೌಡಪ್ಪನವರ, ಭೀಮಸಿ ಬೆಳಗಲಿ, ಗೌರಿ ಮಿಳ್ಳಿ, ಸಂಗೀತಾ ಖಾನಾಪೂರ, ಪರಮಳಾ ಮಿರ್ಜಿ, ಮಲ್ಲಪ್ಪ ಹೆಗ್ಗಳಗಿ, ಮಹಾದೇವ ಗೌಡಪ್ಪನವರ, ಪ್ರಭು ಗುಡ್ಡಾಕರ, ನಂದೆಪ್ಪ ಬೆಳಗಲಿ, ಮಲ್ಲು ಗೌಡಪ್ಪನವರ, ಜಿ. ಆಯ್. ಹತ್ತಳ್ಳಿ, ಜಗದೀಶ ಕುಳ್ಳೋಳ್ಳಿ, ಮುಖ್ಯಗುರುಗಳಾದ ಎಸ್.ಬಿ.ಪಾಲಬಾವಿ, ಬಿ.ಎಸ್.ಬಡಿಗೇರ, ಆರ್. ಹೆಚ್. ತುಳಸಿಗೇರಿ, ಎಸ್.ಎಮ್.ಬೆಳ್ಳುಬ್ಬಿ, ಎನ್. ಎಮ್. ಗುರ್ಲಹೊಸೂರ, ಆರ್. ವಿ. ಬಾಣಕಾರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next