Advertisement
ಕರ್ಮಕಾರಕನಾದ ಶನಿ, ನ್ಯಾಯ, ನೀತಿ ಅಧಿಪತಿಯಾದ ಶನಿ, ತಮ್ಮ ಪ್ರಾರಬ್ಧ ಕರ್ಮಕ್ಕೆ ಅನುಗುಣವಾಗಿ ಈ ಜನ್ಮದಲ್ಲಿ ಫಲಗಳನ್ನು ಕೊಡುತ್ತಾನೆ. ಹಿಂದಿನ ಜನ್ಮದ ಕರ್ಮದ ಫಲದ ಪ್ರಕಾರ ಶನಿಯು, ಉಚ್ಛ ರಾಶಿ, ಮೂಲ ತ್ರಿಕೋನ, ನ್ವ ಕ್ಷೇತ್ರ, ಮಿತ್ರ ಕ್ಷೇತ್ರ, ನೀಚ ರಾಶಿ ಹಾಗೂ ಶತ್ರು ಕ್ಷೇತ್ರಗಳಲ್ಲಿ ಸ್ಥಾನವನ್ನು ಪಡೆಯುತ್ತಾನೆ. ಇದಕ್ಕೆ ಅನುಸಾರವಾಗಿ ಶನಿ ದಶಾ, ಶನಿ ಭುಕ್ತಿ ಕಾಲದಲ್ಲಿ ಶುಭ, ಅಶುಭ ಫಲಗಳನ್ನು ಜಾತಕದ ವ್ಯಕ್ತಿ ಅನುಭವಿಸಬೇಕಾಗುತ್ತದೆ.
Related Articles
Advertisement
ಒಂದು ವೇಳೆ ಶನಿಯು ಕೇಂದ್ರದಲ್ಲಿ ಉಪಸ್ಥಿತನಾಗಿದ್ದರೆ ಶಶ ಮಹಾ ಯೋಗವು ಲಭಿಸುತ್ತದೆ. ಅದೇ ರೀತಿ ಶನಿಯು ಮಿತ್ರಕ್ಷೇತ್ರ, ಕೇಂದ್ರ, ತ್ರಿಕೋನ ಸ್ಥಿತನಾಗಿದ್ದರೆ (6,8, 12 ಸ್ಥಾನಗಳನ್ನು ಬಿಟ್ಟು) ಶನಿಯ ದಶಾ ಭುಕ್ತಿ ಕಾಲದಲ್ಲಿ ಸಂಪೂರ್ಣ ಶುಭ ಫಲಗಳು ದೊರೆಯುತ್ತದೆ. ಅದೇ ರೀತಿ ಗೋಚಾರದಲ್ಲಿ ಬರುವ ಏಳೂವರೆ, ಅಷ್ಠಮ, ಪಂಚಮ ಶನಿಯ ಶುಭ ಮತ್ತು ಅಶುಭ ಫಲಗಳು ಶನಿ ಅಷ್ಠಕ ವರ್ಗದಲ್ಲಿರುವ ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಶನಿ ಅಷ್ಠಕ ವರ್ಗದಲ್ಲಿ 4 ಅಥವಾ ಅದಕ್ಕಿಂತ ಹೆಚ್ಚಿನ ಶುಭ ಅಂಶಗಳಿದ್ದರೆ, ಚಂದ್ರನಿಂದ 8ನೇ ಮನೆ, 1ನೇ, 1ನೇ, 2ನೇ ಮನೆಗಳಲ್ಲಿ ಶನಿಯ ಚಲನೆಯ ಕಾಲದಲ್ಲಿ ಯಾವುದೇ ಅಶುಭ ಫಲಗಳು ಗೋಚರಿಸುವುದಿಲ್ಲ. ಒಂದು ವೇಳೆ ಅಷ್ಠಕ ವರ್ಗದಲ್ಲಿ 4ಕ್ಕಿಂತ ಕಡಿಮೆ ಶುಭ ಅಂಶಗಳನ್ನು ಹೊಂದಿದ್ದರೆ, ಶನಿಯ ಚಲನೆಯ ಕಾಲದಲ್ಲಿ ಜಾತಕದ ವ್ಯಕ್ತಿ ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ.
ರವೀಂದ್ರ ಐರೋಡಿ, ಸಾಸ್ತಾನ
ಜ್ಯೋತಿಷ್ಯ ವಿಶ್ಲೇಷಕರು