ಇಂಧೋರ್: ವಿರಾಟ್ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಮುಂದಿನ ನಾಗ್ಪುರ ಪಂದ್ಯದಲ್ಲಿ ಹೊಸತೊಂದು ದಾಖಲೆ ಬರೆಯಲಿದ್ದಾರೆ. ಅದೂ ಬ್ಯಾಟಿಂಗ್ ಮಾಡುವ ಮುನ್ನವೇ ಶತಕದ ಸಾಧನೆ!
ಇಂಧೋರ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ರೋಹಿತ್ ಈ ದಾಖಲೆ ಬರೆಯಲಿದ್ದಾರೆ. ಟಿ ಟ್ವೆಂಟಿ ಅಂತಾರಾಷ್ಟ್ರೀಯದಲ್ಲಿ ನೂರು ಪಂದ್ಯವಾಡಿದ ಏಕೈಕ ಭಾರತೀಯ ಪುರುಷ ಆಟಗಾರ ಎಂಬ ಸಾಧನೆಗೆ ಶರ್ಮಾ ಪಾತ್ರವಾಗಲಿದ್ದಾರೆ.
ಹೊಸದಿಲ್ಲಿ ಪಂದ್ಯದಲ್ಲೇ 99ನೇ ಪಂದ್ಯವಾಡಿ ಅತೀ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯವಾಡಿದ ದಾಖಲೆ ಬರೆದ ರೋಹಿತ್ ಗುರುವಾರ ನಡೆಯಲಿರುವ ಇಂಧೋರ್ ಪಂದ್ಯದಲ್ಲಿ ಶತಕ ಸಾಧನೆ ಮಾಡಲಿದ್ದಾರೆ.
ಈವರೆಗೆ ಭಾರತೀಯ ಮಹಿಳಾ ಟಿ ಟ್ವೆಂಟಿ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ನೂರಕ್ಕೂ ಹೆಚ್ಚು ಟಿ ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯವಾಡಿದ ಸಾಧನೆ ಮಾಡಿದ್ದಾರೆ.
ಪಾಕಿಸ್ಥಾನದ ಶೋಯೆಬ್ ಮಲಿಕ್ 111 ಪಂದ್ಯವಾಡಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.