ಚೆನ್ನೈ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಚಿಪಾಕ್ ಕ್ರೀಡಾಂಗಣದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಆರಂಭಿಕ ಕುಸಿತ ಕಂಡ ಭಾರತಕ್ಕೆ ರೋಹಿತ್ ನೆರವಾದರು.
44 ಓವರ್ ಗಳ ಬಳಿಕ ಟೀಂ ಇಂಡಿಯಾ ಮೂರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಆಡುತ್ತಿದೆ. ರೋಹಿತ್ ಶರ್ಮಾ ಎರಡು ಸಿಕ್ಸರ್ ಮತ್ತು 14 ಬೌಂಡರಿ ನೆರವಿನಿಂದ 107 ಗಳಿಸಿ ಆಡುತ್ತಿದ್ದಾರೆ. ಉಪನಾಯಕ ರಹಾನೆ 27 ರನ್ ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ:ಎರಡನೇ ಟೆಸ್ಟ್: ಮಹತ್ವದ ಟಾಸ್ ಗೆದ್ದ ವಿರಾಟ್, ಟೀಂ ಇಂಡಿಯಾದಲ್ಲಿ ಮೂರು ಬದಲಾವಣೆ
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಎರಡನೇ ಓವರ್ ನಲ್ಲೇ ಆಘಾತ ಎದುರಾಗಿತ್ತು. ಒಲಿಸ್ಟೋನ್ ಎಸೆತಕ್ಕೆ ಶುಭ್ಮನ್ ಗಿಲ್ ವಿಕೆಟ್ ಒಪ್ಪಿಸಿದರು. ಚೇತೇಶ್ವರ ಪೂಜಾರ ಉತ್ತಮ ಆರಂಭ ಪಡೆದರೂ 21 ರನ್ ಗೆ ಔಟಾದರು. ನಾಯಕ ವಿರಾಟ್ ಕೊಹ್ಲಿ ಶೂನ್ಯ ಗಳಿಕೆ.
ಇಂಗ್ಲೆಂಡ್ ಪರ ಒಲಿಸ್ಟೋನ್, ಜ್ಯಾಕ್ ಲೀಚ್ ಮತ್ತು ಮೊಯಿನ್ ಅಲಿ ತಲಾ ಒಂದು ವಿಕೆಟ್ ಪಡೆದರು.