Advertisement

ಡಿಆರ್‌ಎಸ್‌ ವೈಫ‌ಲ್ಯಕ್ಕೆ ರೋಹಿತ್‌ ಶರ್ಮ ಔಟ್‌?

04:54 PM Jun 28, 2019 | keerthan |

ಮ್ಯಾಂಚೆಸ್ಟರ್: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ಭಾರತ ಆರಂಭಿಕ ಬ್ಯಾಟ್ಸ್‌ ಮನ್‌ ರೋಹಿತ್‌ ಶರ್ಮ ಡಿಆರ್‌ಎಸ್‌ (ಡಿಸಿಷನ್‌ ರಿವ್ಯೂ ಸಿಸ್ಟಮ್‌)ನ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದಾರೆ. ರೋಹಿತ್‌ ಶರ್ಮ ನಾಟೌಟ್‌ ಎಂದು ಹಲವಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಿದ್ದಾರೆ.

Advertisement

ಕೆಮರ್‌ ರೋಚ್‌ ಎಸೆತದ ತಂಡದ 6ನೇ ಓವರ್‌ನ ಕೊನೆಯ ಎಸೆತ, ರೋಹಿತ್‌ ಬ್ಯಾಟ್‌ ಮತ್ತು ಪ್ಯಾಡ್‌ ನಡುವೆ ಸದ್ದು ಮಾಡುತ್ತ ವಿಕೆಟ್‌ ಕೀಪರ್‌ ಶೈ ಹೋಪ್‌ ಕೈಸೇರಿತು, ಔಟ್‌ಗಾಗಿ ಬಲವಾದ ಮನವಿ ಸಲ್ಲಿಸಲಾಯಿತು. ಅಂಪೈರ್‌ ವಿಂಡೀಸ್‌ ಮನವಿ ಪುರಸ್ಕರಿಸಲಿಲ್ಲ. ತಕ್ಷಣ ಜೇಸನ್‌ ಹೋಲ್ಡರ್‌ ಡಿಆರ್‌ಎಸ್‌ ಮೊರೆ ಹೋದರು. ಅಲ್ಲಿ ಬ್ಯಾಟ್‌ ಅಥವಾ ಪ್ಯಾಡ್‌ನ‌ಲ್ಲಿ ಯಾವುದಕ್ಕೆ ಚೆಂಡು ತಾಗಿದ್ದು ಅನ್ನುವುದು ಸ್ಪಷ್ಟವಾಗಲಿಲ್ಲ. ಹೀಗಿದ್ದರೂ ಮೂರನೇ ಅಂಪೈರ್‌ ರೋಹಿತ್‌ಗೆ ಔಟ್‌ ನೀಡಿದರು. ಇದು ಡಿಆರ್‌ಎಸ್‌ ವೈಫ‌ಲ್ಯವೇ ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next