Advertisement

ಡಿಆರ್‌ಎಸ್‌ ತೀರ್ಪು ವಿವಾದ: ಟ್ವಿಟರ್‌ನಲ್ಲಿ ಪ್ರಶ್ನಿಸಿದ ರೋಹಿತ್‌

09:20 AM Jun 29, 2019 | keerthan |

ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದ ವೇಳೆ ವಿವಾದಾತ್ಮಕ ಡಿಆರ್‌ಎಸ್‌ ತೀರ್ಪಿಗೆ ಔಟ್‌ ಆಗಿದ್ದ ರೋಹಿತ್‌ ಶರ್ಮ ತಮ್ಮ ವಿರುದ್ಧದ ತೀರ್ಪನ್ನು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ. 2 ಫೋಟೊ ಜತೆಗೆ ಕೈಯನ್ನು ಮುಖಕ್ಕೆ ಅಡ್ಡವಾಗಿ ಹಿಡಿದಿರುವ ಎಮೊಜಿ ಪ್ರಕಟಿಸಿರುವ ಅವರು ಈ ತೀರ್ಪಿನ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ರೋಹಿತ್‌ಗೆ ಬೆಂಬಲ ನೀಡಿದ್ದಾರೆ.

Advertisement

ರೋಹಿತ್‌ ಶರ್ಮ 18 ರನ್‌ ಗಳಿಸಿದ್ದಾಗ ಕೆಮರ್‌ ರೋಚ್‌ ಎಸೆತದ ಚೆಂಡು ರೋಹಿತ್‌ ಪ್ಯಾಡ್‌ ಮತ್ತು ಬ್ಯಾಟ್‌ ನಡುವೆ ಸದ್ದು ಮಾಡುತ್ತ ವಿಕೆಟ್‌ ಕೀಪರ್‌ ಶೈ ಹೋಪ್‌ ಕೈ ಸೇರಿತು. ಆಗ ಔಟ್‌ಗಾಗಿ ಮನವಿ ಸಲ್ಲಿಸಲಾಯಿತು. ಆದರೆ ಅಂಪಾಯರ್‌ ಪುರಸ್ಕರಿಸಲಿಲ್ಲ. ಬಳಿಕ 3ನೇ ಅಂಪಾಯರ್‌ಗೆ ವಿಂಡೀಸ್‌ ಮನವಿ ಸಲ್ಲಿಸಿತು. ಅಲ್ಲಿ ಬ್ಯಾಟಿಗೆ ಚೆಂಡು ಬಡಿದಿದೆ ಎನ್ನುವುದು ಖಚಿತಗೊಳ್ಳದಿದ್ದರೂ ರೋಹಿತ್‌ಗೆ ಔಟ್‌ ನೀಡಲಾಯಿತು. ಇದು ವಿವಾದಕ್ಕೆ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next