Advertisement

ಆರಂಭಿಕರಾಗಿ ಮೊದಲ ಪಂದ್ಯದಲ್ಲೇ ರೋಹಿತ್ ಶೂನ್ಯ !

09:49 AM Sep 29, 2019 | Team Udayavani |

ವಿಜಯನಗರಂ: ರೋಹಿತ್ ಶರ್ಮಾ ಅವರನ್ನು ಟೆಸ್ಟ್ ಮಾದರಿಯಲ್ಲಿ ಆರಂಭಿಕನಾಗಿ ಆಡಿಸ ಬೇಕೆಂಬ ಕೂಗು ಮೊದಲಿನಿಂದಲೂ ಇತ್ತು. ಸದ್ಯ ಅದಕ್ಕೆ ಅವಕಾಶ ದೊರೆತಿದ್ದು, ಆದರೆ ಈ ಆರಂಭಿಕನ ಅವಕಾಶವನ್ನು ಕೈ ಚೆಲ್ಲಿದ್ದಾರೆ.

Advertisement

ಇಲ್ಲಿನ ಆಂಧ್ರ ಪ್ರದೆಶ ಸ್ಪೋರ್ಟ್ ಕಾಂಪ್ಲೆಕ್ಸ್ ನಲ್ಲಿ ನಡೆಯುತ್ತಿರುವ ದಕ್ಷಿಣ ಅಫ್ರಿಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ತಂಡದ ಸಾರಥ್ಯವನ್ನು ರೋಹಿತ್ ಹೊತ್ತಿದ್ದಾರೆ. ಮೊದಲ ಬಾರಿಗೆ ಟೆಸ್ಟ್ ಮಾದರಿಯಲ್ಲಿ ಆರಂಭಿಕನಾಗಿ ಕಾಣಿಸಿಕೊಂಡ ರೋಹಿತ್ ಗಳಿಸಿದ್ದು ಮಾತ್ರ ಸೊನ್ನೆ. ಕೇವಲ ಎರಡು ಎಸೆತ ಎದುರಿಸಿದ ಶರ್ಮಾ ಫಿಲಾಂಡರ್ ಎಸೆತದಲ್ಲಿ ಕ್ಲಾಸೆನ್ ಗೆ ಕ್ಯಾಚ್ ನೀಡಿದರು.

ಈಗಾಗಲೆ ನಿಗದಿತ ಮಾದರಿ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಯಶಸ್ಸು ಕಂಡಿರುವ ರೋಹಿತ್ ಟೆಸ್ಟ್ ನಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆಂದು ಕಾದು ನೊಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next