Advertisement
ಎಪ್ರಿಲ್ 16 ರಾತ್ರಿ ರೋಹಿತ್ ಹತ್ಯೆಯಾಗಿದ್ದರು. ಸಂಬಂಧಿಯೊಬ್ಬರ ವಿಚಾರವಾಗಿ ದಂಪತಿ ಜಗಳ ಮಾಡಿ ಕೊಂಡಿದ್ದರು. ಉತ್ತರಾಖಂಡಕ್ಕೆ ಮತಹಾಕಲು ತೆರಳಿದ್ದ ರೋಹಿತ್ ವಾಪಸ್ ದಿಲ್ಲಿಗೆ ಬರುವಾಗ ಕುಡಿಯುತ್ತಿದ್ದರು. ಆಗ ಗಲಾಟೆ ನಡೆದಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಕೊಲೆ ಮಾಡಿದ್ದ ಬಗ್ಗೆ ಅಪೂರ್ವಾ ತಪ್ಪೊಪ್ಪಿಕೊಂಡಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ನಡೆದ ಕೊಲೆ ಇದಲ್ಲ. ರೋಹಿತ್‌ರನ್ನು ವಿವಾಹ ವಾದ ಅನಂತರ ನನ್ನ ಕನಸುಗಳೆಲ್ಲ ನುಚ್ಚುನೂರಾಗಿದ್ದವು ಎಂದು ಅಪೂರ್ವಾ ಹೇಳಿಕೊಂಡಿದ್ದಾರೆ. ಅಪೂರ್ವಾರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಲಾಗಿದೆ. ಈ ಮಧ್ಯೆ ರೋಹಿತ್ ತಾಯಿ ಉಜ್ವಲಾ ಮಾತನಾಡಿ ಅಪೂರ್ವಾ ಹಾಗೂ ಆಕೆಯ ಪಾಲಕರಿಗೆ ನಮ್ಮ ಆಸ್ತಿಯ ಮೇಲೆ ಕಣ್ಣಿದೆ ಎಂದು ಆರೋಪಿಸಿದ್ದಾರೆ. Advertisement
ರೋಹಿತ್ ತಿವಾರಿ ಪತ್ನಿ ಬಂಧನ
01:18 AM Apr 25, 2019 | Team Udayavani |