ಮುಂಬಯಿ: ಬಾಲಿವುಡ್ ನಲ್ಲಿ ಮತ್ತೆ ʼಸಿಂಗಂʼ ಸರಣಿಯ ಸಿನಿಮಾ ಬರಲಿದೆ. ಅಜಯ್ ದೇವಗನ್ ಮತ್ತೆ ಖಾಕಿ ತೊಟ್ಟು ಅಬ್ಬರಿಸಲಿದ್ದಾರೆ. ಈ ಬಾರಿ ʼಸಿಂಗಂʼ ಖದರ್ ಡಬಲ್ ಆಗಿರಲಿದೆ ಎಂದು ನಿರ್ದೇಶಕ ರೋಹಿತ್ ಶೆಟ್ಟಿ ಹೇಳಿದ್ದಾರೆ.
“ಪಿಂಕ್ ವಿಲ್ಲಾ” ಜೊತೆಗಿನ ಎಕ್ಸ್ಕ್ಲೂಸಿವ್ ಮಾತಿನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ “ಸಿಂಗಂ ಆಗೇನ್” ಬಗ್ಗೆ ಮಾತನಾಡಿದ್ದಾರೆ.
“ಸಿಂಗಂ ಆಗೇನ್” ಸೆಟ್ಟೇರಲು ಇನ್ನು ಕೆಲ ಸಮಯ ಇದೆ. ಅದಕ್ಕೂ ಮೊದಲು “ಇಂಡಿಯನ್ ಪೊಲೀಸ್ ಫೋರ್ಸ್” ಸಿನಿಮಾವನ್ನು ಮುಗಿಸಬೇಕಿದೆ. ಈ ಸಿನಿಮಾ ಮುಗಿದ 2-3 ತಿಂಗಳ ಬಳಿಕ “ಸಿಂಗಂ ಆಗೇನ್” ಸಿನಿಮಾದ ಕೆಲಸಗಳು ಆರಂಭವಾಗುತ್ತದೆ. ನಾನು “ಸಿಂಗಂ ಆಗೇನ್” ಮಾಡಲು ಉತ್ಸುಕನಾಗಿದ್ದೇನೆ. ಏಕೆಂದರೆ ಈ ಬಾರಿ ನೀವು ಚಿತ್ರದಲ್ಲಿ ವಿಭಿನ್ನ ಸಿಂಗಂ ಅನ್ನು ನೋಡುತ್ತೀರಿ. ಇದು ದೊಡ್ಡದಾಗಿದೆ, ಇದರ ಸ್ಕ್ರಿಪ್ಟ್ ಚೆನ್ನಾಗಿ ಹೊರಹೊಮ್ಮಿದೆ. ಇದು ವಿಶಿಷ್ಟವಾಗಿದೆ ಮತ್ತು ಇದು ನನಗೆ ತಿಳಿದಿರುವ ಅತ್ಯಂತ ಪ್ರೀತಿಯ ಪಾತ್ರಗಳೆಲ್ಲವೂ ಇದರಲ್ಲಿರಲಿದೆ. ಅಜಯ್ ಮತ್ತು ನಾನು ಮತ್ತೊಮ್ಮೆ ಸಿಂಗಮ್‌ನಲ್ಲಿ ಒಟ್ಟಿಗೆ ಬರುತ್ತಿರುವುದು ಖುಷಿಯಿದೆ” ಎಂದಿದ್ದಾರೆ.
2024 ರ ಸ್ವಾತಂತ್ರ್ಯ ದಿನದಂದು ಈ ಸಿನಿಮಾ ತೆರೆಗೆ ಬರಲಿದೆ. ಅಜಯ್ ದೇವಗನ್ ಜೊತೆ ಕರೀನಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ವಿಕ್ಕಿ ಕೌಶಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ.
ರೋಹಿತ್ ಶೆಟ್ಟಿ ಈ ಹಿಂದೆ “ಸಿಂಗಂ” ಮಾದರಿಯಲ್ಲಿ “ಸಿಂಬಾ” ಮತ್ತು “ಸೂರ್ಯವಂಶಿ” ಚಿತ್ರಗಳನ್ನು ಮಾಡಿದ್ದರು.