Advertisement

ಐಪಿಎಲ್ 2023: ಮುಂಬೈ ಇಂಡಿಯನ್ಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ ರೋಹಿತ್ ಶರ್ಮಾ

02:56 PM Apr 03, 2023 | Team Udayavani |

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್‌ ನ ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಪರಿಪಾಠ ಮುಂದುವರಿಸಿದೆ. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 8 ವಿಕೆಟ್‌ಗಳ ಸೋಲು ಅನುಭವಿಸಿತು. ಈ ಸೋಲು ಮುಂಬೈ ತಂಡದಲ್ಲಿನ ಹಲವಾರು ಸಮಸ್ಯೆಗಳನ್ನು ಹೈಲೈಟ್ ಮಾಡಿದೆ. ಮತ್ತೊಂದು ಪ್ರಶಸ್ತಿ ಗೆಲ್ಲಬೇಕಾದರೆ ಮುಂಬೈ ಫ್ರಾಂಚೈಸಿ ಈ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕಿದೆ.

Advertisement

ಪಂದ್ಯದ ನಂತರದ ಮಾತನಾಡಿದ ನಾಯಕ ರೋಹಿತ್ ಶರ್ಮಾ ಅವರು ತಮ್ಮ ಬೌಲಿಂಗ್ ಘಟಕಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಜಸ್ಪ್ರೀತ್ ಬುಮ್ರಾ ಇಲ್ಲದೆ ಆಡುವುದು ಅಭ್ಯಾಸವಾಗುತ್ತಿದೆ ಎಂದು ಒಪ್ಪಿಕೊಂಡರು.

ಪಂದ್ಯದ ಬಗ್ಗೆ ಮಾತನಾಡಿದ ಅವರು, “ಬ್ಯಾಟಿಂಗ್ ನಲ್ಲಿ ನಮಗೆ ಉತ್ತಮ ಆರಂಭ ಸಿಗಲಿಲ್ಲ. ಆದರೆ ತಿಲಕ್ ವರ್ಮಾ ಸೇರಿ ಕೆಲವು ಉತ್ತಮ ಪ್ರದರ್ಶನ ನೀಡಿದರು. ಆದರೆ ನಾವು ಬೌಲಿಂಗ್ ನಲ್ಲಿ ನಮ್ಮ ಯೋಜನೆಗಳನ್ನು ಚೆನ್ನಾಗಿ ಕಾರ್ಯಗತಗೊಳಿಸಲು ಆಗಲಿಲ್ಲ ಎಂದರು.

ಬುಮ್ರಾ ಅವರು ಸಂಪೂರ್ಣ ಅಭಿಯಾನದಿಂದ ಹೊರಬಿದ್ದಿರುವಾಗ ತಮ್ಮ ಉಳಿದ ಬೌಲರ್‌ ಗಳು ತಮ್ಮ ಪೂರ್ಣ ಪ್ರತಿಭೆ ಮತ್ತು ಸಾಮರ್ಥ್ಯವನ್ನು ತೋರಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಎರಡ್ಮೂರು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿಎಸ್. ಯಡಿಯೂರಪ್ಪ

Advertisement

“ಕಳೆದ ಆರರಿಂದ ಎಂಟು ತಿಂಗಳಿಂದ ನಾನು ಜಸ್ಪ್ರೀತ್ ಬುಮ್ರಾ ಇಲ್ಲದೆ ಆಡುವುದನ್ನು ಅಭ್ಯಾಸ ಮಾಡಿದ್ದೇನೆ. ಖಂಡಿತ, ಇದು ವಿಭಿನ್ನ ಸೆಟಪ್ ಆದರೆ ಯಾರಾದರೂ ಎದುರು ಬರಬೇಕಿದೆ. ನಮ್ಮ ನಿಯಂತ್ರಣದಲ್ಲಿ ಇರದ ವಿಚಾರದ ಬಗ್ಗೆ ನಾವು ಏನೂ ಮಾಡಲು ಸಾಧ್ಯವಿಲ್ಲ. ತಂಡದಲ್ಲಿರುವ ಇತರ ವ್ಯಕ್ತಿಗಳು ಸಹ ಸಾಕಷ್ಟು ಪ್ರತಿಭಾವಂತರಾಗಿದ್ದಾರೆ. ನಾವು ಅವರಿಗೆ ಆ ಬೆಂಬಲವನ್ನು ನೀಡಬೇಕಾಗಿದೆ. ಇದು ಕೇವಲ ಈ ಋತುವಿನ ಮೊದಲ ಪಂದ್ಯ, ಇನ್ನೂ ಎದುರುನೋಡಲು ಬಹಳಷ್ಟು ಇದೆ” ಎಂದರು.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು 171 ರನ್ ಮಾಡಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16.2 ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

Advertisement

Udayavani is now on Telegram. Click here to join our channel and stay updated with the latest news.

Next