Advertisement

ಭರ್ಜರಿ ಟ್ರೋಲ್ ಆಗುತ್ತಿದೆ ರೋಹಿತ್ ಶರ್ಮಾರ ಈ ಫೋಟೋ..!

12:28 PM Mar 02, 2021 | Team Udayavani |

ಸಿನಿಮಾ ತಾರೆಯರಂತೆ ಕ್ರಿಕೆಟಿಗರೂ ಆಗಾಗ ನೆಟ್ಟಿಗರಿಗೆ ಹಾಗು ‍ಟ್ರೋಲಿಗರಿಗೆ ಆಹಾರವಾಗುತ್ತಾರೆ. ಇದೀಗ ರೋಹಿತ್‍ ಶರ್ಮಾ ಶೇರ್‍ ಮಾಡಿರುವ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಕಾರಣವಾಗಿದೆ.

Advertisement

ಹೌದು ಇತ್ತೀಚೆಗೆ ಅಲಹಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಕ್ರಿಕೆಟ್‍ ಪಂದ್ಯ ನಡೆದಿದೆ. ಈ ಸಮಯದ ಒಂದು ಫೋಟೋವನ್ನು ಕ್ರಿಕೆಟಿಗ ರೋಹಿತ್ ಶರ್ಮಾ ಸೋಷಿಯಲ್ ಮೀಡಿಯಾದಲ್ಲಿ ಶೇರ್‍ ಮಾಡಿದ್ದು, ಟ್ರೋಲಿಗೆ ಕಾರಣವಾಗಿದೆ.

ಫೋಟೋದಲ್ಲಿ ಕಾಣುವಂತೆ ರೋಹಿತ್ ಕ್ರಿಕೆಟ್‍ ಮೈದಾನದಲ್ಲಿ ತಲೆಗೆ ಟೋಪಿ ತೊಟ್ಟು, ಗಲ್ಲವನ್ನು ಕೈಗಳ ಮೇಲಿಟ್ಟು ಮಲಗಿದ್ದಾರೆ. ಶರ್ಮಾ ಈ ಫೋಟೊವನ್ನು ಶೇರ್‍ ಮಾಡಿ ಕೆಲವೇ ಅವಧಿಗೆ ಬರೋಬ್ಬರಿ 1.4 ಮಿಲಿಯನ್ ಲೈಕ್‍ಗಳು ಮತ್ತು 10,000 ಕಮೆಂಟ್‍ಗಳು ಬಂದಿವೆ. ವಿಶೇಷ ಏನಂದ್ರೆ ರೋಹಿತ್ ಶರ್ಮಾ ಮಡದಿ ರಿತಿಕಾ ಕೂಡ ಫೋಟೋಕ್ಕೆ ಕಮೆಂಟ್ ಮಾಡಿದ್ದು, “ನೀವು ಈ ರೀತಿ ಮಲಗಿರುವುದು ನನಗೆ ನಗು ತರಿಸಿದೆ” ಎಂದಿದ್ದಾರೆ.

Advertisement

ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಮಲಗಿರುವ ಈ ಫೋಟೋವನ್ನು ಟ್ರೋಲಿಗರು ತಮಾಷೆಯಾಗಿ ಬಳಸುತ್ತಿದ್ದಾರೆ. ಹಾಸಿಗೆ ಮೇಲೆ ಮಲಗಿರುವಂತೆ, ತಾರೆ ಜಮೀನ್ ಪರ್ ಸಿನಿಮಾದಲ್ಲಿ ಅಮಿರ್‍ ಖಾನ್‍ ಕೂತಿರುವಂತೆ, ಇತಿಹಾಸ ತರಗತಿಯಲ್ಲಿ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುವಂತೆ, ವಡಾಪಾವ್ ಅಂಗಡಿ ಮುಂದೆ ಕಾದು ಕುಳಿತಿರುವಂತೆ ಫೋಟೋಗಳನ್ನು ಎಡಿಟ್‍ ಮಾಡಿ ಹಾಕಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next