Advertisement

ಆಸೀಸ್‌ ನೆಲದಲ್ಲಿ ಈ ಬಾರಿಯೂ ಟೆಸ್ಟ್‌ ಸರಣಿ ಗೆಲ್ಲಬೇಕಾದರೆ ರೋಹಿತ್‌ ಅನಿವಾರ್ಯ!

04:40 PM Dec 11, 2020 | keerthan |

ಆಸ್ಟ್ರೇಲಿಯ ಪ್ರವಾಸದಲ್ಲಿರುವ ಭಾರತ ಏಕದಿನ ಮತ್ತು ಟಿ20 ಸರಣಿಯನ್ನು ಮುಕ್ತಾಯಗೊಳಿಸಿದೆ. ಏಕದಿನ ಸರಣಿಯನ್ನು ಸೋತರೂ ಟಿ20 ಸರಣಿಯನ್ನು ಗೆದ್ದು ಬೀಗಿದ ಭಾರತಕ್ಕೆ ಮುಂದೆ ಕಾದಿರುವ ಅಗ್ನಿಪರೀಕ್ಷೆಯೆಂದರೆ 4 ಪಂದ್ಯಗಳ ಟೆಸ್ಟ್‌ ಸರಣಿ. 2018-19ರಲ್ಲಿ ಭಾರತ ಆಸೀಸ್‌ ನೆಲದಲ್ಲಿಯೇ ಟೆಸ್ಟ್‌ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆದರೆ ಈ ಬಾರಿ ಭಾರತ ತಂಡದಲ್ಲಿ ಹಲವಾರು ಸಮಸ್ಯೆಗಳು ಎದ್ದು ಕಾಣಿಸುತ್ತಿದೆ.

Advertisement

ಹೌದು ನಾಯಕ ವಿರಾಟ್‌ ಕೊಹ್ಲಿ ಮೊದಲ ಟೆಸ್ಟ್‌ ಬಳಿಕ ಭಾರತಕ್ಕೆ ವಾಪಸಾಗುತ್ತಿದ್ದು ತಂಡಕ್ಕೆ ಓರ್ವ ಅನುಭವಿ ಆಟಗಾರನ ಕೊರತೆ ಕಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನೊಂದೆಡೆ ತಂಡದ ಅನುಭವಿ ವೇಗಿ ಇಶಾಂತ್‌ ಶರ್ಮ ಕೂಡ ಗಾಯದ ಸಮಸ್ಯೆಯಿಂದ ಆಸೀಸ್‌ ಪ್ರವಾಸದಿಂದ ಹೊರಗುಳಿದಿದ್ದಾರೆ.

 ಆರಂಭಿಕನ ಸಮಸ್ಯೆ

ಸದ್ಯ ರೋಹಿತ್‌ ಅನುಪಸ್ಥಿತಿಯಲ್ಲಿ ಭಾರತ ತಂಡದ ಓಪನಿಂಗ್‌ ಬ್ಯಾಟ್ಸ್‌ಮನ್‌ ಯಾರೆಂಬ ಸಮಸ್ಯೆ ಇದುವರೆಗೂ ಗೊಂದಲದಿಂದಲೇ ಕೂಡಿದೆ. ಮಯಾಂಕ್ ಅಗರ್ವಾಲ್‌, ಪೃಥ್ವಿ ಶಾ, ಶುಭಮನ್‌ ಗಿಲ್‌ ಮೇಲ್ನೊಟಕ್ಕೆ ಆರಂಭಿಕರಾಗಿದ್ದರೂ ಅನುಭವ ಸಾಲದು. ಆಸೀಸ್‌ ಬೌಲರ್‌ಗಳನ್ನು ಮೆಟ್ಟಿ ನಿಲ್ಲುವಷ್ಟು ಸಮರ್ಥರಲ್ಲ ಈ ಆಟಗಾರರು. ಅಭ್ಯಾಸ ಪಂದ್ಯದಲ್ಲಿ ತೋರಿದ ಪ್ರದರ್ಶನವೇ ಇದಕ್ಕೆ ಉತ್ತಮ ನಿದರ್ಶನ. ಇನ್ನು ಕೆ. ಎಲ್‌. ರಾಹುಲ್‌ ಟೆಸ್ಟ್‌ ಸರಣಿಯಲ್ಲಿದ್ದರೂ ಆಡುವ ಕುರಿತು ಖಚಿತತೆ ಇಲ್ಲವಾಗಿದೆ. ಅಭ್ಯಾಸ ಪಂದ್ಯದಲ್ಲಿಯೂ ರಾಹುಲ್ ಕಾಣಿಸಿಕೊಂಡಿಲ್ಲ. ಅನುಭವಿ ಎಡಗೈ ಆರಂಭಕಾರ ಶಿಖರ್‌ ಧವನ್‌ ಕೂಡ ಟೆಸ್ಟ್‌ ಸರಣಿಯಲ್ಲಿಲ್ಲ, ಹೀಗಿರುವಾಗ ಪ್ಲೇಯಿಂಗ್‌ ಇಲೆವೆನ್‌ ಯಾವ ರೀತಿ ಇರಲಿದೆ ಎನ್ನುವುದೇ ಕುತೂಹಲವಾಗಿದೆ.

Advertisement

ರೋಹಿತ್‌ ಸೇರ್ಪಡೆಯಿಂದ ತಂಡಕ್ಕೆ ಬಲ

ಶುಕ್ರವಾರ ನಡೆದ ಫಿಟ್‌ನೆಸ್‌ ಪರೀಕ್ಷೆಯಲ್ಲಿ ತೇರ್ಗಡೆಯಾದ ರೋಹಿತ್‌ ಶರ್ಮ ಆಸೀಸ್‌ ಪ್ರವಾಸ ಕೈಗೊಳ್ಳುವುದು ಪಕ್ಕಾ ಆಗಿದೆ. ಆದರೆ ರೋಹಿತ್‌ ಶರ್ಮ ಮೊದಲೆರಡು ಟೆಸ್ಟ್‌ಗೆ ಲಭ್ಯರಾಗುವುದು ಅನುಮಾನವಾಗಿದೆ. ಕಾರಣ ಕೋವಿಡ್‌-19 ನಿಯಮಾವಳಿ ಪ್ರಕಾರ ರೋಹಿತ್‌ 14 ದಿನ ಕ್ವಾರಂಟೈನ್‌ ವಾಸ ಅನುಭವಿಸಬೇಕಿದೆ. ಹೀಗಾಗಿ ಅವರು ಲಭ್ಯವಾಗುವುದು ಕೊನೆಯ ಎರಡು ಪಂದ್ಯಕ್ಕೆ ಮಾತ್ರ!

ಇದನ್ನೂ ಓದಿ:ಫಿಟ್ ನೆಸ್ ಟೆಸ್ಟ್ ನಲ್ಲಿ ತೇರ್ಗಡೆಯಾದ ರೋಹಿತ್: ಆಸೀಸ್ ಗೆ ಹಾರಲಿದ್ದಾರೆ ಹಿಟ್ ಮ್ಯಾನ್

 ರೋಹಿತ್‌-ಅಗರ್ವಾಲ್‌ ಆರಂಭಿಕ ಜೋಡಿ

ಸದ್ಯದ ಮಟ್ಟಿಗೆ ರೋಹಿತ್‌ ಮತ್ತು ಅಗರ್ವಾಲ್‌ ಜೋಡಿ ಆರಂಭಿಕರಾಗಿ ಆಡುವುದು ಸೂಕ್ತ. ಈ ಹಿಂದೆಯೂ ನಡೆದ ಟೆಸ್ಟ್‌ ಪಂದ್ಯದಲ್ಲಿ ಈ ಜೋಡಿ ಆರಂಭಿನಾಗಿ ಉತ್ತಮ ಪ್ರದರ್ಶನ ತೋರಿದೆ. ಒಟ್ಟಾರೆ ರೋಹಿತ್‌ ಆಗಮನದಿಂದ ಭಾರತ ತಂಡದಲ್ಲಿ ಕೊಂಚ ಮಟ್ಟಿನ ಆತ್ಮವಿಶ್ವಾಸ ಹೆಚ್ಚಿದೆ ಎಂದರೂ ತಪ್ಪಾಗಲಾರದು. ರೋಹಿತ್‌ ಒಮ್ಮೆ ಕ್ರೀಸ್ ಕಚ್ಚಿ ಆಡಿದರೆ ಮತ್ತೆ ಅವರನ್ನು ತಡೆಯಲಾಗದು ಎನ್ನುವುದನ್ನು ರೋಹಿತ್ ಈ ಮೊದಲು ಅನೇಕ ಬಾರಿ ತೋರಿಸಿಕೊಟ್ಟಿದ್ದಾರೆ. ಆಸೀಸ್‌ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ಎದುರಿಸುವಲ್ಲಿ ರೋಹಿತ್‌ ಶರ್ಮ ಸಮರ್ಥ ಎನ್ನಲಡ್ಡಿಯಿಲ್ಲ. ಇದೆಲ್ಲದರ ಮಧ್ಯೆ ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಸಿಡಿದು ನಿಂತರೆ ಈ ಬಾರಿಯೂ ಆಸೀಸ್‌ಗೆ ಸೋಲುಣಿಸುವುದು ಕಷ್ಟ ಸಾಧ್ಯವಾಗದು.

ಆತ್ಮವಿಶ್ವಾಸ ಹೆಚ್ಚಿಸಿದ ಬುಮ್ರಾ

ಆಸೀಸ್‌ ವಿರುದ್ಧದ ಡೇ ನೈಟ್‌ ಟೆಸ್ಟ್‌ ಅಭ್ಯಾಸ ಪಂದ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿದ್ದ ಭಾರತ ತಂಡಕ್ಕೆ ಆಸರೆಯಾದದ್ದು ಜಸ್ಪ್ರೀತ್‌ ಬುಮ್ರಾ. ಕೆಳ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಬುಮ್ರಾ ಆಸೀಸ್‌ ಬೌಲಿಂಗಿಗೆ ಸೆಡ್ಡು ಹೊಡೆದು ಅಜೇಯ 55 ರನ್‌ ಸಿಡಿಸಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಈ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಅರ್ಧಶತಕ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next