Advertisement

Dharamshala Test; ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ರೋಹಿತ್‌ ಶರ್ಮ

12:14 AM Mar 06, 2024 | Team Udayavani |

ಧರ್ಮಶಾಲಾ: ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಅಚ್ಚರಿಯೊಂದಕ್ಕೆ ಕಾರಣರಾದರು. ಅವರು ಅಂತಿಮ ಟೆಸ್ಟ್‌ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ ಮೂಲಕ ಧರ್ಮಶಾಲಾಕ್ಕೆ ಆಗಮಿಸಿದರು!

Advertisement

ಜಾಮ್‌ ನಗರದಲ್ಲಿ ನಡೆದ ಅಂಬಾನಿ ಕುಟುಂಬದ ಮದುವೆಯಲ್ಲಿ ಪಾಲ್ಗೊಂಡಿದ್ದ ರೋಹಿತ್‌ ಶರ್ಮ ಮಂಗಳವಾರ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್‌ ಮೂಲಕ ಧರ್ಮಶಾಲಾಕ್ಕೆ ಪಯಣಿಸಿದರು. ಸ್ಟೇಡಿಯಂನ ಹೊರವಲಯದಲ್ಲಿ ಹೆಲಿಕಾಪ್ಟರ್‌ ಇಳಿದು, ಸ್ವಲ್ಪ ದೂರ ನಡೆದು ಬಳಿಕ ಕಾರಿನಲ್ಲಿ ಹೊಟೇಲ್‌ನತ್ತ ತೆರಳಿದರು.

ದಟ್ಟ ಮಂಜಿನಿಂದಾಗಿ ಧರ್ಮಶಾಲಾಕ್ಕೆ ನಿಗದಿತ ವೇಳೆಯಲ್ಲಿ ವಿಮಾನ ಸಂಪರ್ಕ ಇಲ್ಲದ ಕಾರಣ ರೋಹಿತ್‌ ಶರ್ಮ ಅವರಿಗೆ ಹೆಲಿಕಾಪ್ಟರ್‌ ಪ್ರಯಾಣ ಅನಿವಾರ್ಯವಾಗಿತ್ತು.

ಕ್ರಿಕೆಟಿಗರು ಹೆಲಿಕಾಪ್ಟರ್‌ನಲ್ಲಿ ಆಗಮಿಸುವುದು ಇದೇ ಮೊದಲೇನಲ್ಲ. ಇತ್ತೀಚೆಗೆ ಬಿಗ್‌ ಬಾಶ್‌ ಲೀಗ್‌ ಪಂದ್ಯಕ್ಕಾಗಿ ಡೇವಿಡ್‌ ವಾರ್ನರ್‌ ಹೆಲಿಕಾಪ್ಟರ್‌ ಮೂಲಕ ನೇರವಾಗಿ ಸಿಡ್ನಿ ಅಂಗಳಕ್ಕೆ ಬಂದಿಳಿದಿದ್ದರು. ಆಗ ಪಂದ್ಯದ ಆರಂಭಕ್ಕೆ ಕೆಲವೇ ನಿಮಿಷವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next