Advertisement

INDvsENG; ಪಂತ್ ಮುಂದಿಟ್ಟು ಡಕೆಟ್ ಗೆ ಕುಟುಕಿದ ರೋಹಿತ್ ಶರ್ಮಾ

11:49 AM Mar 07, 2024 | Team Udayavani |

ಧರ್ಮಶಾಲಾ: ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ಮಾಡುವ ಯಶಸ್ವಿ ಜೈಸ್ವಾಲ್‌ ಅವರಿಂದಾಗಿ ಭಾರತೀಯ ಕ್ರಿಕೆಟ್‌ ತಂಡ ಕ್ರಿಡಿಟ್‌ ತೆಗೆದುಕೊಳ್ಳುತ್ತಿದೆ ಎಂಬರ್ಥದಲ್ಲಿ ಮಾತನಾಡಿದ್ದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಬೆನ್‌ ಡಕೆಟ್‌ಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ತಿರುಗೇಟು ನೀಡಿದ್ದಾರೆ.

Advertisement

ರಿಷಭ್‌ ಪಂತ್‌ ಎನ್ನುವ ಇನ್ನೊಬ್ಬ ಆಟಗಾರ ನಮ್ಮಲ್ಲಿದ್ದಾನೆ ಎನ್ನುವ ಸಂಗತಿ ಅವರಿಗೆ ಗೊತ್ತಿಲ್ಲ ಎಂದು ರೋಹಿತ್‌ ಡಕೆಟ್‌ ಗೆ ಕುಟುಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್‌, ನಮ್ಮ ತಂಡದಲ್ಲಿ ರಿಷಭ್‌ ಪಂತ್‌ ಎಂಬ ವ್ಯಕ್ತಿಯೊಬ್ಬನಿದ್ದಾನೆ. ಬಹುಶಃ ಆತನ ಆಟವನ್ನು ಬೆನ್‌ ಡಕೆಟ್‌ ನೋಡಿಲ್ಲ ಅನ್ನಿಸುತ್ತೆ ಎಂದಿದ್ದಾರೆ.

ಬಾಝ್ಬಾಲ್‌ ಎಂದರೇನು ಗೊತ್ತಿಲ್ಲ

ಇಂಗ್ಲೆಂಡ್‌ ತಂಡ ಕಳೆದ ಬಾರಿ ಇಲ್ಲಿ ಆಡಿದ್ದಕ್ಕಿಂತ ಉತ್ತಮ ಕ್ರಿಕೆಟ್‌ ಆಡಿದೆ. ಯಾರಿಂದಲೂ ಮಾರಕ ಸ್ವಿಂಗ್‌ ಬಂದಿದನ್ನು ನಾನು ನೋಡಿಲ್ಲ. ಆದರೆ ನನಗಿನ್ನೂ ಈ ಬಾಝ್ಬಾಲ್‌ನ ಅರ್ಥವೇನೆಂದು ಗೊತ್ತಾಗಿಲ್ಲ ಎಂದು ರೋಹಿತ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next