Advertisement

ಟೆಸ್ಟ್‌ನಲ್ಲೂ ಇನಿಂಗ್ಸ್‌ ಆರಂಭಿಸಲು ಸಿದ್ಧ: ರೋಹಿತ್‌ ಶರ್ಮ

06:00 AM Aug 18, 2018 | Team Udayavani |

ಮುಂಬಯಿ: ಪ್ರಸ್ತುತ ಇಂಗ್ಲೆಂಡ್‌ ಪ್ರವಾಸದ ಟೆಸ್ಟ್‌ ಸರಣಿಗೆ ಆಯ್ಕೆಯಾಗದ ಭಾರತದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ, ಅವಕಾಶ ಸಿಕ್ಕರೆ ಟೆಸ್ಟ್‌ನಲ್ಲಿ ಇನಿಂಗ್ಸ್‌ ಆರಂಭಿಸಲು ಸಿದ್ಧ ಎಂದು ತಿಳಿಸಿದ್ದಾರೆ. ಕಳೆದ 2 ಟೆಸ್ಟ್‌ ಪಂದ್ಯದಲ್ಲಿ ಆರಂಭಿಕರಾದ ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌ ಮತ್ತು ಮುರಳಿ ವಿಜಯ್‌ ಕಳಪೆ ಬ್ಯಾಟಿಂಗ್‌ ಮಾಡಿ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಈ ಬೆನ್ನಲ್ಲೇ ಮಾತನಾಡಿರುವ ರೋಹಿತ್‌ ಶರ್ಮ, ನಾನು ಏಕದಿನ ಕ್ರಿಕೆಟ್‌ನಲ್ಲಿ ಇನಿಂಗ್ಸ್‌ ಆರಂಭಿಸಲು ಮಾತ್ರ ಸೀಮಿತವಾಗಿಲ್ಲ. ಅವಕಾಶ ಸಿಕ್ಕಿದರೆ, ತಂಡದ ಆಡಳಿತ ಮಂಡಳಿ ಬಯಸಿದರೆ ಟೆಸ್ಟ್‌ನಲ್ಲೂ ಇನಿಂಗ್ಸ್‌ ಆರಂಭಿಸುವೆ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next