Advertisement

ಆತ ಸರಿಯಾದುದನ್ನೇ ಮಾಡಿದ್ದಾನೆ..: ವಿರಾಟ್ ಬೆಂಬಲಕ್ಕೆ ನಿಂತ ರೋಹಿತ್ ಶರ್ಮಾ

08:33 AM Jul 11, 2022 | Team Udayavani |

ನಾಟಿಂಗ್ ಹ್ಯಾಂ:  ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕಳಪೆ ಫಾರ್ಮ್ ನಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬೆಂಬಲವಾಗಿ ನಿಂತಿದ್ದಾರೆ.

Advertisement

ಫಾರ್ಮ್‌ನಲ್ಲಿ ಕುಸಿತವನ್ನು ಸಹಿಸಿಕೊಂಡಿರುವ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಕೇವಲ 1 ಮತ್ತು 11 ರನ್ ಗಳಿಸುವಲ್ಲಿ ಯಶಸ್ವಿಯಾದರು. ಕಳೆದ ವಾರ ಬರ್ಮಿಂಗ್ ಹ್ಯಾಂ ಟೆಸ್ಟ್‌ ನಲ್ಲಿ ಅವರು ಎರಡು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದರು.

ರವಿವಾರ ನಡೆದ ಟಿ20 ಪಂದ್ಯದಲ್ಲಿ ಸತತ ಎರಡು ಎಸೆತಗಳನ್ನು ಬೌಂಡರಿ ಗೆರೆಗೆ ಅಟ್ಟಿದ ವಿರಾಟ್ ಮುಂದಿನ ಎಸೆತದಲ್ಲೇ ಕ್ಯಾಚಿತ್ತು ಔಟಾಗಿದ್ದರು.

ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳ ಟೀಕೆಗಳ ನಡುವೆಯೂ, ನಾಯಕ ರೋಹಿತ್ ಶರ್ಮಾ ಅವರು ಕೊಹ್ಲಿಯನ್ನು ಸಮರ್ಥಿಸಿಕೊಂಡರು. ” ಇಂತಹ ಬಲಿಷ್ಠ ತಂಡದ ವಿರುದ್ಧ ದೊಡ್ಡ ಮೊತ್ತ ಬೆನ್ನಟ್ಟುವಾಗ ಹಾಗೆಯೇ ಬ್ಯಾಟಿಂಗ್ ಮಾಡಬೇಕು. ಅದು ಆಟಗಾರನ ಕ್ವಾಲಿಟಿಯನ್ನು ತೋರಿಸುತ್ತದೆ” ಎಂದು ಹೇಳಿದರು.

ಇದನ್ನೂ ಓದಿ:ಇನ್ನಾದರೂ ಆಗಲಿ ಸ್ಮಾರ್ಟ್‌! ಆರಂಭವಾಗಿ ಏಳು ವರ್ಷ ಕಳೆದರೂ ಮುಗಿಯದ ಕಾಮಗಾರಿ

Advertisement

ಕೊಹ್ಲಿ ಬಗ್ಗೆ ಹಲವರ ಟೀಕೆಗೆ ಪ್ರತಿಕ್ರಿಯೆ ನೀಡಿದ ರೋಹಿತ್, “ ಟೀಕೆ ಮಾಡುವವರು ಹೊರಗಿನಿಂದ ಎಲ್ಲವನ್ನೂ ನೋಡುತ್ತಾರೆ. ಆದರೆ ತಂಡವನ್ನು ಕಟ್ಟುವವರು ನಾವು. ತಂಡದೊಳಗೆ ಏನಿದೆ ಎಂದು ನಮಗೆ ಮಾತ್ರ ಗೊತ್ತು” ಎಂದರು.

ಅಂತಿಮ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 215 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ ಶತಕದ ಹೊರತಾಗಿಯೂ ಭಾರತ 198 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next