ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಟಿ20 ತಂಡದ ನಾಯಕತ್ವ ತ್ಯಜಿಸಿದರೆ ಉತ್ತಮ ಎಂದು ಮಾಜಿ ಆಟಗಾರ ವೀರೆಂದ್ರ ಸೆಹವಾಗ್ ಅಭಿಪ್ರಾಯ ಪಟ್ಟಿದ್ದಾರೆ.
ಗಾಯಗಳು ಮತ್ತು ಕೆಲಸದ ಹೊರೆ ನಿರ್ವಹಣೆಯಿಂದಾಗಿ ನಾಯಕನಾಗಿ ಅಧಿಕಾರ ವಹಿಸಿಕೊಂಡ ನಂತರ ರೋಹಿತ್ ಭಾರತದ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಪಿಟಿಐ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೆಹವಾಗ್, “ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ಗೆ ಟಿ20 ಮಾದರಿಯಲ್ಲಿ ನಾಯಕನಾಗಿ ಬೇರೆಯವರನ್ನು ಮನಸ್ಸಿನಲ್ಲಿಟ್ಟುಕೊಂಡರೆ, ರೋಹಿತ್ ಶರ್ಮಾ ಅವರನ್ನು ಮುಕ್ತಗೊಳಿಸಬಹುದು” ಎಂದಿದ್ದಾರೆ.
“ರೋಹಿತ್ ಗೆ ಅವನ ವಯಸ್ಸಿಗೆ ಅನುಗುಣವಾಗಿ ತನ್ನ ಕೆಲಸದ ಹೊರೆ ಮತ್ತು ಮಾನಸಿಕ ಆಯಾಸವನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಒಮ್ಮೆ ಹೊಸಬರನ್ನು ಟಿ20 ತಂಡದ ನಾಯಕನಾಗಿ ನೇಮಿಸಿದರೆ, ಇದು ರೋಹಿತ್ ಗೆ ವಿರಾಮ ತೆಗೆದುಕೊಳ್ಳಲು ಮತ್ತು ಟೆಸ್ಟ್ ಹಾಗೂ ಏಕದಿನ ಎರಡರಲ್ಲೂ ಭಾರತವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ” ಎಂದು ಸೆಹವಾಗ್ ಹೇಳಿದರು.
ಇದನ್ನೂ ಓದಿ:‘ಓ ಮೈ ಲವ್’ ನಲ್ಲಿ ಕ್ಯೂಟ್ ಲವ್ ಸ್ಟೋರಿ: ಶಶಿಕುಮಾರ್ ಪುತ್ರನ ಹೊಸ ಕನಸಿದು
ಆದಾಗ್ಯೂ, ಮೂರು ಸ್ವರೂಪಗಳಲ್ಲಿ ಭಾರತವನ್ನು ಮುನ್ನಡೆಸಲು ಒಬ್ಬ ನಾಯಕನನ್ನು ಹೊಂದಿರುವ ಪ್ರಸ್ತುತ ನೀತಿಗೆ ತಂಡ ಅಂಟಿಕೊಂಡರೆ, ರೋಹಿತ್ ಶರ್ಮಾ ಸೂಕ್ತ ಆಯ್ಕೆಯಾಗಿದೆ ಎಂದು ಸೆಹವಾಗ್ ಸಮರ್ಥಿಸಿಕೊಂಡರು.