Advertisement

ಸರಣಿ ಭಾರತ ಕೈವಶ: ಹೊಸ ದಾಖಲೆ ಬರೆದ ರೋಹಿತ್ ಶರ್ಮಾ

09:35 AM Nov 22, 2021 | Team Udayavani |

ಕೋಲ್ಕತ್ತಾ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ರವಿವಾರ ಕೋಲ್ಕತ್ತಾದಲ್ಲಿ ನಡೆದ ಮೂರನೇ ಪಂದ್ಯವನ್ನು ರೋಹಿತ್ ಪಡೆ 73 ರನ್ ಅಂತರದಿಂದ ಗೆದ್ದುಕೊಂಡಿದೆ.

Advertisement

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡ ಏಳು ವಿಕೆಟ್ ಕಳೆದುಕೊಂಡು 184 ರನ್ ಗಳಿಸಿತು. ನಾಯಕ ರೋಹಿತ್ ಶರ್ಮಾ 56 ರನ್, ಕೀಪರ್ ಇಶಾನ್ ಕಿಶನ್ 29 ರನ್, ಮತ್ತು ಕೊನೆಯಲ್ಲಿ ದೀಪಕ್ ಚಾಹರ್ ಬಿರುಸಿನ 21 ರನ್ ಕಾಣಿಕೆ ನೀಡಿದರು.

ಗುರಿ ಬೆನ್ನತ್ತಿದ ಕಿವೀಸ್ ಬ್ಯಾಟಿಂಗ್ ನಡೆಸಲು ಪರದಾಡಿತು. ಗಪ್ಟಿಲ್ 51 ರನ್ ಗಳಿಸಿದರೆ, ನಂತರ 17 ರನ್ ಗಳಿಸಿದ ಸೀಫರ್ಟ್ ಅವರದ್ದೇ ಹೆಚ್ಚಿನ ಗಳಿಕೆ. ಕಿವೀಸ್ 17.2 ಓವರ್ ಗಳಲ್ಲಿ 111 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ಅಕ್ಷರ್ ಪಟೇಲ್ ಕೇವಲ 9 ರನ್ ನೀಡಿ ಮೂರು ವಿಕೆಟ್ ಪಡೆದರೆ, ಹರ್ಷಲ್ ಪಟೇಲ್ ಎರಡು ವಿಕೆಟ್ ಕಿತ್ತರು.

ಇದನ್ನೂ ಓದಿ:ಇನ್ನಿಂಗ್ಸಿನ ಎಲ್ಲ 10 ವಿಕೆಟ್‌ ಕೆಡವಿದ ದಕ್ಷಿಣ ಆಫ್ರಿಕಾದ ಸ್ಯಾಮ್‌ ವೈಟ್‌ಹೆಡ್‌

ಪಂದ್ಯದಲ್ಲಿ ಮೂರು ಭರ್ಜರಿ ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 150 ಸಿಕ್ಸರ್ ಗಡಿ ದಾಟಿದರು. ಅತೋ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ 165 ಸಿಕ್ಸ್ ಗಳೊಂದಿಗೆ ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next