ಮೆಲ್ಬರ್ನ್: ಅನುಭವಿ ಆಟಗಾರ ರೋಹಿತ್ ಶರ್ಮ ಕ್ವಾರಂಟೈನ್ ಮುಗಿಸಿದ್ದು, ಬುಧವಾರ ಮೆಲ್ಬರ್ನ್ ನಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಅವರು ನ್ಯೂ ಇಯರ್ ಟೆಸ್ಟ್‌ನಲ್ಲಿ ಆಡುವುದು ಬಹುತೇಕ ಖಚಿತಗೊಂಡಿದೆ.
ರೋಹಿತ್ ಶರ್ಮ ಆರಂಭಿಕನಾಗಿ ಇಳಿಯುವುದಾದರೆ ಕಳಪೆ ಬ್ಯಾಟಿಂಗ್ ತೋರ್ಪಡಿಸುತ್ತಿರುವ ಮಾಯಾಂಕ್ ಅಗರ್ವಾಲ್ ಸ್ಥಾನ ಬಿಡಬೇಕಾಗಬಹುದು. ಇಲ್ಲವೇ ಶುಭಮನ್ ಗಿಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ಹನುಮ ವಿಹಾರಿ ಅವರನ್ನು ಹೊರಗಿಡುವ ಲೆಕ್ಕಾಚಾರವೂ ಇದೆ. ಗಾಯದ ಸಮಸ್ಯೆಗೆ ಸಿಲುಕಿರುವ ಉಮೇಶ್ ಯಾದವ್ ಸ್ಥಾನಕ್ಕೆ ಟಿ. ನಟರಾಜನ್ ಅಥವಾ ನವದೀಪ್ ಸೈನಿ ಅವಕಾಶ ಪಡೆಯಬಹುದು.
ಇದನ್ನೂ ಓದಿ:ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ : ದ್ವಿತೀಯ ಸ್ಥಾನ ಕಾಯ್ದುಕೊಂಡ ಭಾರತ
ಆರ್. ಅಶ್ವಿನ್ ನೂತನ ದಾಖಲೆ
ಆಸೀಸ್ ವಿರುದ್ಧದ ಎರಡನೇ ಟೆಸ್ಟ್‌ನನಲ್ಲಿ ಜೋಶ್ ಹ್ಯಾಝಲ್‌ವುಡ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಟ 192 ಎಡಗೈ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಸಾಧನೆ ಮಾಡಿದರು. ಆ ಮೂಲಕ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಹೆಸರಿನಲ್ಲಿದ್ದ (191) ದಾಖಲೆ ಇಲ್ಲಿ ಪತನಗೊಂಡಿತ್ತು.